ನಾಲ್ಕು ದಿನಗಳ ಲಾಕ್ ಡೌನ್ ಪೂರ್ಣಗೊಂಡ ಮೊದಲ ದಿನವೇ ಬಿತ್ತು ಭಾರಿ ದಂಡ, 393 ವಾಹನಗಳು ಸೀಜ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಠಿಣ ಲಾಕ್ ಡೌನ್ ಮೊದಲ ಹಂತ ಮುಗಿದ ಮೊದಲನೇ ದಿನವೇ ಪೊಲೀಸರು ಭರ್ಜರಿ ಬೇಟೆ ಆಡಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ ವಾಹನ ಮಾಲೀಕರ ವಿರುದ್ಧ ಪ್ರಕರಷ ದಾಖಲಿಸಿ ಲಕ್ಷಾಂತರ ದಂಡ ವಿಧಿಸಲಾಗಿದೆ.

READ | ಅಕ್ಟೋಬರ್ ನಲ್ಲಿ‌ ಬರಲಿರುವ ಕೊರೊನಾ 3ನೇ ಅಲೆ ಮಕ್ಕಳಿಗೆ ಮಾರಕ, ಇದಕ್ಕಾಗಿ ಈಗಿನಿಂದಲೇ ಸಿದ್ಧತೆ, ತಜ್ಞರ ಸಲಹೆಗಳೇನು ಗೊತ್ತಾ?

ಲಾಕ್ ಡೌನ್ ನಿಯಮವನ್ನು ಉಲ್ಲಂಘನೆ ಮಾಡಿದ 393 ವಾಹನಗಳನ್ನು ಸೀಜ್ ಮಾಡಲಾಗಿದೆ. ಇದರಲ್ಲಿ 362 ದ್ವಿ ಚಕ್ರ ವಾಹನ, 10 ಆಟೋ ಹಾಗೂ 21 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ‌. ವಾಹನ ಮಾಲೀಕರ ವಿರುದ್ಧ 249 ಪ್ರಕರಣಗಳನ್ನು ದಾಖಲಿಸಿ 1,21,400 ರೂ. ದಂಡ ವಿಧಿಸಲಾಗಿದೆ.
ಜತೆಗೆ, ಅಂಗಡಿಯೊಂದರ ಮಾಲೀಕನ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೊರೊನಾ ಸೋಂಕು ತಡೆಗೆ ಗುರುವಾರದಿಂದ ಭಾನುವಾರದವರೆಗೆ ಮೊದಲ ಹಂತದ ಕಠಿಣ ಲಾಕ್ ಡೌನ್ ವಿಧಿಸಿತ್ತು. ಇದರಿಂದಾಗಿ, ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಮತ್ತೊಂದು ಹಂತದ ಲಾಕ್ ಡೌನ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಅದು ಮಂಗಳವಾರದಿಂದ ಭಾನುವಾರದವರೆಗೆ ಅನ್ವಯವಾಗಲಿದೆ.

https://www.suddikanaja.com/2021/05/17/complete-lockdown-continue-in-shivamogga/

error: Content is protected !!