ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣೆ ಕೇಂದ್ರದಿಂದ ಸರಬರಾಜು ಆಗುವ ಫೀಡರ್ ಎಎಫ್ 8ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಪ್ರಯುಕ್ತ ಮೇ 28ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ನಗರ ಉಪ ವಿಭಾಗ 3ರ ಎಇಇ ಪ್ರಕಟಣೆಯಲ್ಲಿ ಕೋರಿದ್ದಾರೆ.
ಎಲ್ಲೆಲ್ಲಿ ಕರೆಂಟ್ ಕಟ್ | ಆಲ್ಕೋಳ ವೃತ್ತ, ಇಂದಿರಾ ಕ್ಯಾಂಟೀನ್, ಜಯದೇವ ಬಡಾವಣೆ, ಕಲ್ಲಹಳ್ಳಿ ಎ, ಬಿ, ಸಿ, ಡಿ ಮತ್ತು ಎಫ್ ಬ್ಲಾಕ್, ಕಾಶೀಪುರ, ಲಕ್ಷ್ಮೀಪುರ, ಕರಿಯಣ್ಣ ಬಿಲ್ಡಿಂಗ್, ಕುವೆಂಪು ಬಡಾವಣೆ, ರೇಣುಕಾಂಬ ಬಡಾವಣೆ, ಸೂಡಾ ಕಾಂಪ್ಲೆಕ್ಸ್, ವಿನೋಬನಗರ ಪೊಲೀಸ್ ಠಾಣೆ, ತಿಮ್ಮಕ್ಕ ಲೇಔಟ್, ಕೆಂಚಪ್ಪ ಲೇಔಟ್, ಹುಚ್ಚರಾಯ ಕಾಲೊನಿ, ವೀರಣ್ಣ ಲೇಔಟ್, ಚೇತನಾ ಪಾರ್ಕ್ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.