ಜಿಲ್ಲಾಡಳಿತ-ಖಾಸಗಿ ಆಂಬ್ಯುಲೆನ್ಸ್ ಕೋಲ್ಡ್ ವಾರ್, ದಿಢೀರ್ ಪ್ರತಿಭಟನೆ, ಕೋವಿಡ್‍ನಿಂದ ಮೃತಪಟ್ಟವರ ಹೆಣ ಒಯ್ಯಲು ಕ್ಯಾತೆ, ಬೇಡಿಕೆಗಳೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಖಾಸಗಿ ಆಂಬ್ಯುಲೆನ್ಸ್‍ನವರು ಸೋಮವಾರ ದಿಢೀರ್ ಪ್ರತಿಭಟನೆಗೆ ಮುಂದಾದರು. ಇದರಿಂದ ಕೋವಿಡ್‍ಗೆ ಬಲಿಯಾದ ಹಲವು ಶವಗಳು ಸಂಸ್ಕಾರ ಕಾಣದೇ ಶವಾಗಾರದಲ್ಲೇ ಇಟ್ಟ ಪ್ರಸಂಗ ಸೋಮವಾರ ನಡೆದಿದೆ.

https://www.suddikanaja.com/2021/05/18/ambulance-will-seize-if-they-charge-heavy-amount-to-transport-died-body/

ಖಾಸಗಿ ಆಂಬ್ಯುಲೆನ್ಸ್‍ನವರು ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಇದನ್ನು ನಿಗ್ರಹಿಸಲು ಜಿಲ್ಲಾಡಳಿತ ದರ ನಿಗದಿಪಡಿಸಿದೆ. ಆದರೆ, ಈ ದರವನ್ನು ಒಪ್ಪಿಕೊಳ್ಳಲು ಆಂಬ್ಯುಲೆನ್ಸ್‍ನವರು ಸುತಾರಾಂ ಸಿದ್ಧರಿಲ್ಲ. ಹೀಗಾಗಿ, ದರ ಪರಿಷ್ಕರಿಸಬೇಕು ಎಂದು ಆಂಬ್ಯುಲೆನ್ಸ್ ಮಾಲೀಕರು, ಚಾಲಕರು ಆಗ್ರಹಿಸಿದ್ದಾರೆ.

ಬೇಡಿಕೆಗಳೇನು?

  • ಜಿಲ್ಲಾಡಳಿತ ನಿಗದಿಪಡಿಸಿದ ದರವನ್ನು ಪರಿಷ್ಕರಿಸಬೇಕು. ಓಮ್ನಿ ಆಂಬ್ಯುಲೆನ್ಸ್‍ಗಳಿಗೆ ಕಿ.ಮೀ.ಗೆ 20 ರೂ. ನೀಡಬೇಕು.
  • ಖಾಸಗಿ ಆಂಬ್ಯುಲೆನ್ಸ್‍ಗಳ ಚಾಲಕರನ್ನು ಕೊರೊನಾ ವಾರಿಯರ್ಸ್‍ಗಳೆಂದು ಪರಿಗಣಿಸಬೇಕು.

4 ಪಿಪಿಇ ಕಿಟ್ ಕೊಡಿ | ಪ್ರಸ್ತುತ ಜಿಲ್ಲಾಡಳಿತದ ಸೂಚನೆಯಂತೆ ಖಾಸಗಿ ಆಂಬ್ಯುಲೆನ್ಸ್‍ನವರಿಗೆ 2 ಪಿಪಿಇ ಕಿಟ್ ಕೊಡಲಾಗುತ್ತಿದೆ. ಆದರೆ, ನಾಲ್ಕು ನೀಡುವಂತೆ ಅವರು ಒತ್ತಾಯಿಸಿದ್ದಾರೆ. ಹೆಣ ಸಾಗಿಸುವಾಗ 2 ಯಾವುದಕ್ಕೂ ಸಾಲುವುದಿಲ್ಲ ಎನ್ನುವುದು ಅವರ ತಾಕೀತಾಗಿದೆ. ಒಟ್ಟಾರೆ, ಜಿಲ್ಲಾಡಳಿತ ಮತ್ತು ಆಂಬ್ಯುಲೆನ್ಸ್‍ನವರ ನಡುವಿನ ಕೋಲ್ಡ್ ಮುಗಿದಿಲ್ಲ.

https://www.suddikanaja.com/2021/05/24/hospital-registration-cancel-if-demand-for-money-to-give-dead-body/

error: Content is protected !!