ಲಸಿಕೆಗಾಗಿ ಬೆಳಗ್ಗೆ 5 ಗಂಟೆಯಿಂದಲೇ ಸರದಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಕುವೆಂಪು ರಸ್ತೆಯಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಲಸಿಕೆಗಾಗಿ‌ ಜನ ಸರದಿಯಲ್ಲಿ ನಿಂತಿದ್ದಾರೆ.

READ | ಶಿವಮೊಗ್ಗದ ಹಲವೆಡೆ ಮೈಕ್ರೋ ಕಂಟೈನ್ಮೆಂಟ್ ಜೋನ್, ಎಲ್ಲೆಲ್ಲಿ ಗೊತ್ತಾ?

ಕಳೆದ ಎರಡ್ಮೂರು ದಿನಗಳಿಂದ ಸರಿಯಾಗಿ ಲಸಿಕೆ ಪೂರೈಕೆ ಆಗುತ್ತಿಲ್ಲ. ಸರದಿಯಲ್ಲಿ‌ ನಿಂತರೂ‌ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಹೋಗಬೇಕಾದ ಸ್ಥಿತಿ ಇರುವುದರಿಂದ ಜನ ಬೆಳ್ಳಂ ಬೆಳಗ್ಗೆ ಸರದಿಯಲ್ಲಿ ಬಂದು ನಿಲ್ಲುತಿದ್ದಾರೆ. ಬೆಳಗ್ಗೆ 9 ಗಂಟೆಗೆ ಟೋಕನ್ ನೀಡುವ ಪ್ರಕ್ರಿಯೆ ಆರಂಭವಾಗುತಿದ್ದು, 10 ಗಂಟೆಯಿಂದ ಲಸಿಕೆ ನೀಡಲಾಗುತ್ತಿದೆ.

ಕುಳಿತುಕೊಳ್ಳಲು ಆಸನ | ಲಸಿಕೆ ಪಡೆಯಲು‌ ಬಂದವರ ಅನುಕೂಲಕ್ಕಾಗಿ ಆಸನದ ವ್ಯವಸ್ಥೆ ಮಾಡಲಾಗಿದೆ. ಸರದಿಯಲ್ಲಿ‌ ಇರುವವರಿಗೆ ಲಸಿಕೆ ಕೇಂದ್ರದಲ್ಲಿ ಜನದಟ್ಟಣೆ ಆಗದ ಹಾಗೆ ಒಬ್ಬೊಬ್ಬರಿಗೆ ಒಳಗೆ ಬಿಡಲಾಗುತ್ತಿದೆ. ಲಸಿಕೆ ಪಡೆದ ನಂತರ ಅರ್ಧ ಗಂಟೆ ಕಾಯಬೇಕಾಗಿರುವುದರಿಂದ ಒಳಗೆ ಯಾರಿಗೂ ತೊಂದರೆ ಆಗಬಾರದೆಂಬ ಉದ್ದೇಶದಿಂದ ಶಿಸ್ತು ಬದ್ಧವಾಗಿ ನಿರ್ವಹಿಸಲಾಗುತ್ತಿದೆ. ಮಾಸ್ಕ್, ಸ್ಯಾನಿಟೈಸರ್ ಗಳನ್ನು ಅಲ್ಲಲ್ಲಿ ಇಡಲಾಗಿದೆ. ಸೋಮವಸರ ಬೆಳಗ್ಗೆ ಲಸಿಕೆ ಪಡೆಯಲು ಸಾಕಷ್ಟು ಜನ ಆಗಮಿಸಿದ್ದು, ಪ್ರಕ್ರಿಯೆ ಆರಂಭಗೊಂಡಿದೆ.

https://www.suddikanaja.com/2021/01/29/railway-over-bridge-in-shivamogga-district/

error: Content is protected !!