ಶಿವಮೊಗ್ಗದಲ್ಲಿ ದಾಖಲಾಯ್ತು ಕನಿಷ್ಠ ತಾಪಮಾನ, ಸಂಜೆಯಿಂದ ದಿಢೀರ್ ಮಳೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ಹಲವೆಡೆ ಸಂಜೆಯಿಂದ ಭಾರಿ‌ ಮಳೆ ಸುರಿಯುತ್ತಿದೆ.
ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಸೊರಬದಲ್ಲಿ ಸಾಧಾರಣ ಮಳೆಯಾದರೆ ಇನ್ನುಳಿದ ಕಡೆಗಳಲ್ಲಿ ಮೋಡ ಕವಿದ ವಾತಾವರಣವಿದೆ.

READ | ಒಂದೇ ದಿನ ಬಿತ್ತು 92 ಸಾವಿರ ರೂ. ದಂಡ, ಅಂಗಡಿಯವರ ಮೇಲೂ ಕೇಸ್

ಕಳೆದ 24 ಗಂಟೆಯಲ್ಲಿ 0.1 ಎಂ.ಎಂ ಮಳೆಯಾಗಿದೆ. ಶನಿವಾರ ಸಂಜೆಯಿಂದ ಮಳೆ ಸುರಿಯುತ್ತಿದ್ದು, ಗುಡುಗು, ಮಿಂಚು ಸಹ ಜೋರಾಗಿದೆ. ಹವಾಮಾನ ಇಲಾಖೆ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಿತ್ತು.
ಕನಿಷ್ಠ ತಾಪಮಾನ ದಾಖಲು | ಶಿವಮೊಗ್ಗ, ಕೊಡಗು, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿಕ್ಕಮಗಳೂರು, ಹಾಸನದಲ್ಲಿ ಕಳೆದ 24 ಗಂಟೆಯಲ್ಲಿ ಕನಿಷ್ಠ 18ರಿಂದ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

error: Content is protected !!