ಗುಡ್ ನ್ಯೂಸ್ | ಹಾಲು, ತರಕಾರಿ, ದಿನಸಿ ಖರೀದಿಯ ಸಮಯ ಬದಲಾಯಿಸಿ ಆದೇಶ, ಮೇ 2ರಿಂದ ಅನ್ವಯ

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ಹಾಲು, ತರಕಾರಿ, ದಿನಸಿ ಇತ್ಯಾದಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ಸಾಲುತಿಲ್ಲ ಎಂದು ಗೊಣಗುತ್ತಿದ್ದರು. ಹಾಗೂ ಲಾಕ್ ಡೌನ್ ನಿಂದಾಗಿ 6 ರಿಂದ 10 ಗಂಟೆಯವರೆಗೆ ಮಾತ್ರ ವಸ್ತುಗಳ ಖರೀದಿಗೆ ಕಾಲಾವಕಾಶ ನೀಡಲಾಗಿತ್ತು. ಇದರಿಂದ ಜನಸಂದಣಿ ಆಗುತಿತ್ತು. ಇದನ್ನು ಮನಗಂಡು ರಾಜ್ಯ ಸರ್ಕಾರ ಪರಿಷ್ಕøತ ಆದೇಶ ಹೊರಡಿಸಿದೆ.

https://www.suddikanaja.com/2021/04/28/new-ration-card-number-distribution/

ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಅವರು ಈ ಬಗ್ಗೆ ಶನಿವಾರ ಆದೇಶಿಸಿದ್ದಾರೆ.
ಸಂಜೆ 6 ಗಂಟೆಯವರೆಗೆ ಇದಕ್ಕೆ ಅವಕಾಶ | ಮಾರುಕಟ್ಟೆಯಲ್ಲಿ ಆಗುತ್ತಿರುವ ಜನದಟ್ಟಣೆ, ನೂಕು ನುಗ್ಗಲು ತಪ್ಪಿಸಲು ಮೇ 2ರಿಂದ ಅನ್ವಯವಾಗುವಂತೆ ಎಲ್ಲ ರೀತಿಯ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಲಾಗಿದೆ. ಇದರ ಬದಲಿಗೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಹಾಪ್ ಕಾಮ್ಸ್, ಎಲ್ಲ ಹಾಲಿನ ಬೂತ್ ಗಳು, ತಳ್ಳುವ ಗಾಡಿ ಮೂಲಕ ಹಣ್ಣು ತರಕಾರಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡದೇ ಮಾರುಕಟ್ಟೆ ಬೆಲೆಗೆ ಮಾಡುವಂತೆ ಹಾಗೂ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಅನುಮತಿ ನೀಡಲಾಗಿದೆ.
ಎಪಿಎಂಸಿ ಹಾಗೂ ದಿನಸಿ ಅಂಗಡಿಗಳನ್ನು ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ. ಇದನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಸೂಚಿಸಲಾಗಿದೆ.

https://www.suddikanaja.com/2021/04/22/dc-shivakumar-brief-about-night-and-weekend-curfew/

error: Content is protected !!