ವಚನಗಳನ್ನು ಉರ್ದುಗೆ ತರ್ಜುಮೆ ಮಾಡಿದ ಶಾಹದ್ ಬಾಗಲಕೋಟೆ ನಿಧನ, ಬೋಧನೆಗೆಂದು ಮಲೆನಾಡಿಗೆ ಬಂದಿದ್ದರು

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಅಕ್ಕಮಹಾದೇವಿ, ಬಸವಣ್ಣನ ಅವರ ವಚನಗಳನ್ನು ಕನ್ನಡದಿಂದ ಉರ್ದುಗೆ ತರ್ಜುಮೆ ಮಾಡಿದ ಶಾಹದ್ ಬಾಗಲಕೋಟೆ‌ ಅವರು ಗುರುವಾರ ನಿಧನ‌ ಹೊಂದಿದ್ದಾರೆ.

READ | ವಿ.ಐ.ಎಸ್.ಎಲ್ ನಲ್ಲಿ ಆಕ್ಸಿಜನ್ ಉತ್ಪಾದನೆ ಹೆಚ್ಚಿಸಲು ಸರ್ಕಾರದಿಂದ ನೆರವು, ಹೊಸ ಕಂಪ್ರೆಸ್ಸರ್ ಅಳವಡಿಕೆಗೆ ಅಗತ್ಯ ಕ್ರಮ

ಶಾಹದ್ ಬಾಗಲಕೋಟೆ ಕಾವ್ಯನಾಮದಿಂದ ಗುರುತಿಸಿಕೊಂಡಿದ್ದ ಕವಿ ಮನಗುಳಿ (84) ನಿಧನರಾಗಿದ್ದಾರೆ. ಇವರು 3 ಹೆಣ್ಣು, 2 ಗಂಡು ಹಾಗೂ ಪತ್ನಿಯನ್ನು ಅಗಲಿದ್ದಾರೆ.
ಶಿಕ್ಷಕರಾಗಿ‌ ಆಗಮಿಸಿದ್ದರು‌ | ಮನಗುಳಿ ಅವರು ಮೂಲತಃ ಬಾಗಲಕೋಟೆಯವರಾಗಿದ್ದಾರೆ.‌ ಇವರು 1976ರಲ್ಲಿ ಜಂಬೂರು ಶಾಲೆಯ ಶಿಕ್ಷಕರಾಗಿ ಆಗಮಿಸಿದ್ದರು. ಕೆಲ ವರ್ಷ ಸಾಗರದಲ್ಲಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ವಿವಿಧೆಡೆ ಸೇವೆ ಸಲ್ಲಿಸಿ‌ ಮೆಚ್ಚುಗೆ ಪಡೆದಿದ್ದ ಇವರು ಶಿರಾಳಕೊಪ್ಪ ಪಟ್ಟಣದಲ್ಲಿ ವಾಸವಾಗಿದ್ದರು.
ಸಾಹಿತ್ಯಕ್ಕೆ ಕ್ಷೇತ್ರಕ್ಕೆ ಅಪಾರ ಕೊಡುಗೆ | ಮನಗುಳಿ ಅವರು ಬರೆದಿರುವ ಕಾವ್ಯಾಂಜಲಿ, ದುಹಾಂಜಲಿ ಉರ್ದು ಪುಸ್ತಕ ಪ್ರಕಟಗೊಂಡಿವೆ. ಅಕ್ಕಮಹಾದೇವಿ, ಬಸವಣ್ಣ ಅವರ ವಚನಗಳನ್ನು ಕನ್ನಡದಿಂದ ಉರ್ದುಗೆ ಭಾಷಾಂತರ ಕೂಡ ಮಾಡಿದ್ದಾರೆ. ಹೀಗೆ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ. ನಿಧನಕ್ಕೆ ಹಲವು ಗಣ್ಯರು‌ ಸಂತಾಪ ಸೂಚಿಸಿದ್ದಾರೆ.

error: Content is protected !!