ಆರು ಜನರ ಬಲಿ ಪಡೆದ ಕೊರೊನಾ, ಮುಂದುವರಿದ ಅಟ್ಟಹಾಸ, ತಾಲೂಕುವಾರು ಮಾಹಿತಿ ಇಲ್ಲಿದೆ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಅಟ್ಟಹಾಸ ದಿನೇ ದಿನೆ ಹೆಚ್ಚುತ್ತಿದೆ. ಶನಿವಾರ ಆರು ಜನರನ್ನು ಬಲಿ ಪಡೆದಿರುವ ವೈರಸ್ ಜನರಲ್ಲಿ ಭೀತಿ ಹುಟ್ಟಿಸಿದೆ. ಇದುವರೆಗೆ 386 ಜನ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.

READ | ಲಸಿಕೆಗಾಗಿ ಮುಂದುವರಿದ ಸರದಿ, ಹೇಗಿದೆ‌ ಸ್ಥಿತಿ?

ಶನಿವಾರ 657 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, 610 ಜನ ಗುಣಮುಖರಾಗಿದ್ದಾರೆ. 29 ವಿದ್ಯಾರ್ಥಿಗಳು, ಆರು ಕಾಲೇಜು ಸಿಬ್ಬಂದಿಗೆ ಕೊರೊನಾ‌ ಸೋಂಕು ತಗುಲಿದೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 349, ಕೋವಿಡ್ ಕೇರ್ ಸೆಂಟರ್ 36, ಖಾಸಗಿ‌ ಆಸ್ಪತ್ರೆಯಲ್ಲಿ 289, ಹೋಮ್ ಐಸೋಲೇಷನ್ ನಲ್ಲಿ 1993, ಟ್ರಿಯೇಜ್ ನಲ್ಲಿ 160 ಸೇರಿ‌ ಒಟ್ಟು 2,827 ಸಕ್ರಿಯ ಪ್ರಕರಣಗಳಿವೆ.
ತಾಲೂಕುವಾರು ವರದಿ | ಶಿವಮೊಗ್ಗ 244, ಭದ್ರಾವತಿ 75, ಶಿಕಾರಿಪುರ 33, ತೀರ್ಥಹಳ್ಳಿ 144, ಸಾಗರ 31, ಸೊರಬ 48, ಹೊಸನಗರ 67, ಹೊರ ಜಿಲ್ಲೆ 15 ಕೊರೊನಾ ಪಾಸಿಟಿವ್ ಬಂದಿವೆ.

error: Content is protected !!