2 ದಿನ ಭದ್ರಾವತಿಯಲ್ಲಿ ಲಾಕ್‍ಡೌನ್, ಏನಿರುತ್ತೆ ಏನಿರಲ್ಲ?, ಸೋಂಕು ಅಧಿಕ ಇರುವೆಡೆ ಖಡಕ್ ರೂಲ್ಸ್

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ತಾಲೂಕಿನಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಲಾಕ್‍ಡೌನ್ ಘೋಷಿಸಲಾಗಿದೆ.

READ | ಶಿವಮೊಗ್ಗದ ಹಲವೆಡೆ ವೀಕೆಂಡ್ ಲಾಕ್ ಡೌನ್, ಹಳ್ಳಿಗಳಲ್ಲಿ ಸೊಂಕು ಉಲ್ಬಣ ತಡೆಗೆ ಸ್ವಯಂ ಪ್ರೇರಿತ ಬಂದ್

ಜಿಲ್ಲಾಧಿರಿಗಳ ನಿರ್ದೇಶನ ಮೇರೆಗೆ ಕ್ರಮಕೈಗೊಳ್ಳಲಾಗಿದ್ದು, ಶನಿವಾರ ಬೆಳಗ್ಗೆ 6 ರಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಲಾಕ್ ಡೌನ್ ಇರಲಿದೆ. ಈ ವೇಳೆ, ಅನಗತ್ಯ ಓಡಾಡುವಂತಿಲ್ಲ ಎಂದು ತಹಸೀಲ್ದಾರ್ ಜಿ.ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಏನಿರುತ್ತೆ | ನಂದಿನಿ ಔಟ್‍ಲೇಟ್, ಮೆಡಿಕಲ್, ಆಸ್ಪತ್ರೆ, ದಿನಸಿ ಅಂಗಡಿಗಳು ಹೊರತು ಪಡಿಸಿ ಎಲ್ಲವೂ ಬಂದ್ ಇರಲಿವೆ. ತುರ್ತು ಸಂದರ್ಭದ ಹೊರತುಪಡಿಸಿ ಯಾರೂ ಓಡಾಡುವಂತಿಲ್ಲ. ಹಾಗೊಮ್ಮೆ ಓಡಾಡುವುದು ಕಂಡುಬಂದರೆ ಪೊಲೀಸರು ಮುಲಾಜಿಲ್ಲದೇ ಕ್ರಮಕೈಗೊಳ್ಳಲಿದ್ದಾರೆ.
ಸೋಂಕು ಇರುವೆಡೆ ಇನ್ನಷ್ಟ ಖಡಕ್ ರೂಲ್ಸ್ | ಭದ್ರಾವತಿ ತಾಲೂಕಿನ ಯಾವ ಪ್ರದೇಶಗಳಲ್ಲಿ ಸೋಂಕು ಅಧಿಕ ಸಂಖ್ಯೆಯಲ್ಲಿದೆಯೋ ಅದರ ಮೇಲೆ ವಿಶೇಷ ನಿಗಾ ಇಡಲಾಗುತ್ತಿದೆ. ಅಲ್ಲಿಂದ ಯಾರೂ ಓಡಾಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.

https://www.suddikanaja.com/2021/05/26/man-killed-a-person-in-bhadravathi/

error: Content is protected !!