ಗಾಂಧಿ ಬಜಾರ್ ವಾಹನ ಜಖಂ ಕೇಸ್, ಇನ್ನಿಬ್ಬರು ಅರೆಸ್ಟ್, ಬಂಧಿತರ ಮೇಲೆ ಬಿತ್ತು ಗೂಂಡಾ ಕೇಸ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗಾಂಧಿ ಬಜಾರ್ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ವಾಹನ ಜಖಂ ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇದುವರೆಗೆ ನಾಲ್ವರನ್ನು ಕಸ್ಟಡಿಗೆ ತೆಗೆದುಕೊಂಡಂತಾಗಿದೆ.

https://www.suddikanaja.com/2021/05/20/two-person-arrested-for-breaking-car/

READ | ಮತ್ತೊಂದು ಹಂತದ ಲಾಕ್ ಡೌನ್ ಜಾರಿ, ಜೂನ್ 7ರ ವರೆಗೆ ಕರುನಾಡು ಲಾಕ್, ರಿಲ್ಯಾಕ್ಸ್ ಅವಧಿಯಲ್ಲೂ ವಾಹನ ಹೊರತರುವಂತಿಲ್ಲ

ಸೂಳೇಬೈಲಿನ ಮಹಮ್ಮದ್ ಸಲೀಂ (30) ಹಾಗೂ ಭರ್ಮಪ್ಪ ನಗರದ ಅಕ್ರಿ ಖಾನ್‌ (32) ಬಂಧಿಸಲಾಗಿದೆ.
ಬುಧವಾರ ಮಧ್ಯರಾತ್ರಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಘಟನೆ ನಡೆದ ದಿನವೇ ಇಬ್ಬರನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಅವರ ವಿಚಾರಣೆ ಬಳಿಕ ಇನ್ನಿಬ್ಬರು ಖಾಕಿ ಬಲೆಗೆ ಬಿದ್ದಿದ್ದಾರೆ.
ಅವರ ವಿಚಾರ ಮುಂದುವರಿದಿದ್ದು, ಅಪರಾಧ ಹಿನ್ನೆಲೆ ಹೊಂದಿದ್ದಾರೆಯೇ ಎಂಬುವುದನ್ನು ಪತ್ತೆ ಹಚ್ಚಲಾಗುತಿದ್ದೆ.
ಗೂಂಡಾ ಕಾಯ್ದೆ ಅಡಿ ಅರೆಸ್ಟ್ | ಉದ್ದೇಶ ಪೂರ್ವಕವಾಗಿ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಕಾರಣಕ್ಕೆ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ವಿಧಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.suddikanaja.com/2021/05/01/fine-on-vehicle-owners-who-violated-lockdown-rule/

error: Content is protected !!