ಸುದ್ದಿ ಕಣಜ.ಕಾಂ
ಭದ್ರಾವತಿ: ತಾಲೂಕಿನ ಹೊಳೆಹೊನ್ನೂರಿನ ಅರಹತೊಳಲು ಗ್ರಾಮದಲ್ಲಿ ಒಂದೇ ಕುಟುಂಬದ ಇಬ್ಬರನ್ನು ಕ್ರೂರಿ ಕೊರೊನಾ ಬಲಿ ಪಡೆದಿದೆ.
ಅರಹತೊಳಲು ಗ್ರಾಮ ನಿವಾಸಿ ದಿವ್ಯಾ(26) ಮತ್ತು ಇವರ ತಂದೆ ರೇಣುಕಪ್ಪ (62) ಮೃತಪಟ್ಟಿದ್ದಾರೆ. ಮೇ 14ರಂದು ದಿವ್ಯಾ ಮೃತಪಟ್ಟು, 21 ದಿನಗಳ ಅಂತರದಲ್ಲಿ ತಂದೆಯೂ ಅಸುನೀಗಿದ್ದಾರೆ.