ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಸೋಂಕು ವಿದ್ಯಾರ್ಥಿ ವರ್ಗಕ್ಕೂ ಬಿಟ್ಟಿಲ್ಲ. ಜಿಲ್ಲೆಯಲ್ಲಿ ಇಲ್ಲಿವರೆಗೆ ಒಟ್ಟು 1.738 ಕಾಲೇಜು ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ನಿತ್ಯ ಸರಾಸರಿ 30ರ ಮೇಲ್ಪಟ್ಟು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಡುತ್ತಿದೆ. ಅದೇ ರೀತಿ, ಕಾಲೇಜು ಸಿಬ್ಬಂದಿಗೂ ನಂಜು ಬಿಟ್ಟಿಲ್ಲ. ಒಟ್ಟು 389 ಮಂದಿಗೆ ಪಾಸಿಟಿವ್ ಬಂದಿದೆ.
ಕಾಲೇಜಿಗೆ ಹೋಗಿದ್ದರಿಂದ ನಂಜು ತಗುಲಿಲ್ಲ | ಆರಂಭದಲ್ಲಿ ಸರ್ಕಾರದ ನಿರ್ದೇಶನದಂತೆ ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಿದ್ದವು. ಆಗ ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿ ಮತ್ತು ಸಿಬ್ಬಂದಿಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗುತ್ತಿತ್ತು. ಆದರೆ, ಸೋಂಕು ಉಲ್ಬಣ ಹಿನ್ನೆಲೆ ಕಾಲೇಜುಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಆರೋಗ್ಯ ಇಲಾಖೆ ಆಯಾ ವಯೋಮಾನ ಮತ್ತು ವೃತ್ತಿ ಆಧರಿಸಿ ಮಾದರಿಯ ವರದಿ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಬಾಹ್ಯ ಸಂಪರ್ಕದಿಂದ ನಂಜು ತಗುಲಿದೆ ಎನ್ನುವುದು ಇಲಾಖೆಯ ಅಭಿಪ್ರಾಯವಾಗಿದೆ.