ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ರೈಲುಗಳನ್ನು ಜೂನ್ 18ರಿಂದ ಪುನರ್ ಆರಂಭಿಸಲಾಗುತ್ತಿದೆ. ಆದರೆ, ಯಾವುದಕ್ಕೂ ಕೌಂಟರ್ ಟಿಕೆಟ್ ಲಭ್ಯ ಇರುವುದಿಲ್ಲ. ಕಡ್ಡಾಯವಾಗಿ ಆನ್ ಲೈನ್ ನಲ್ಲೇ ಟಿಕೆಟ್ ಗಳನ್ನು ಕಾಯ್ದಿರಿಸಬೇಕು ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
READ | ಶಿವಮೊಗ್ಗದಲ್ಲಿ ಮೊದಲ ಸಲ ನೂರರ ಕೆಳಗಿಳಿದ ಸೋಂಕಿತರ ಸಂಖ್ಯೆ
ರೈಲು ಸಂಖ್ಯೆ 06529 ಬೆಂಗಳೂರು-ತಾಳಗುಪ್ಪ ರೈಲು ಜೂನ್ 18ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಟು ಸಂಜೆ 7.45ಕ್ಕೆ ಶಿವಮೊಗ್ಗ ನಗರ ಹಾಗೂ ರಾತ್ರಿ 10 ಗಂಟೆಗೆ ತಾಳಗುಪ್ಪ ರೈಲು ನಿಲ್ದಾಣಕ್ಕೆ ತಲುಪಲಿದೆ. ಜೂನ್ 19ರಂದು ರೈಲು ಸಂಖ್ಯೆ 06530 ತಾಳಗುಪ್ಪದಿಂದ ಬೆಳಗ್ಗೆ 5 ಗಂಟೆಗೆ ಹೊರಟು ಶಿವಮೊಗ್ಗಕ್ಕೆ 7 ಗಂಟೆಗೆ ತಲುಪಿ 7.05ಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 12 ಗಂಟೆಗೆ ತಲುಪಲಿದೆ.
READ | ಮುಂದುವರಿದ ಮಳೆಯ ಆರ್ಭಟ, ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರು ನದಿಗೆ
ಜನ್ ಶತಾಬ್ದಿ ರೈಲು ಸಂಜೆ 5.15 ಗಂಟೆಗೆ ರಾತ್ರಿ 9.55ಕ್ಕೆ ಶಿವಮೊಗ್ಗಕ್ಕೆ ತಲುಪಲಿದೆ. ಬೆಳಗ್ಗೆ 5.15 ಗಂಅಟೆಗೆ ಶಿವಮೊಗ್ಗದಿಂದ ಹೊರಟು ಬೆಂಗಳೂರಿಗೆ ಬೆಳಗ್ಗೆ 10.15ಕ್ಕೆ ತಲುಪಲಿದೆ.
https://www.suddikanaja.com/2021/06/16/two-accused-arrested-2/