ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿಯಲ್ಲಿ ಇದೇ ಮೊದಲ ಸಲ ಕೊರೊನಾ ಪ್ರಕರಣಗಳ ಸಂಖ್ಯೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದುವರೆಗೆ 50ರ ಮೇಲಿದ್ದ ಸೋಂಕಿತರ ಸಂಖ್ಯೆ ಮಂಗಳವಾರ 19ಕ್ಕೆ ಇಳಿಕೆಯಾಗಿದೆ.
https://www.suddikanaja.com/2021/05/26/corona-cases-increase-in-shivamogga/
ತಾಲೂಕುವಾರು ವರದಿ | ಶಿವಮೊಗ್ಗ 93, ತೀರ್ಥಹಳ್ಳಿ 11, ಶಿಕಾರಿಪುರ 5, ಸಾಗರ 21, ಹೊಸನಗರ 3, ಸೊರಬ 12, ಬಾಹ್ಯ ಜಿಲ್ಲೆಯ ಮೂವರಲ್ಲಿ ಸೋಂಕು ಪತ್ತೆಯಾಗಿದೆ.
ಇಂದು 167 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲಿ ಐವರು ವಿದ್ಯಾರ್ಥಿಗಳು, ಒಬ್ಬರು ಕಾಲೇಜು ಸಿಬ್ಬಂದಿ ಇದ್ದಾರೆ. 500 ಜನ ಗುಣಮುಖರಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 3,657 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. 3,402 ವರದಿಗಳು ನೆಗೆಟಿವ್ ಬಂದಿವೆ.
ಸಕ್ರಿಯ ಪ್ರಕರಣ ಇನ್ನಷ್ಟು ಇಳಿಕೆ | ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಲ್ಲಿ 264, ಡಿಸಿಎಚ್ಸಿಯಲ್ಲಿ 116, ಕೋವಿಡ್ ಕೇರ್ ಸೆಂಟರ್ ನಲ್ಲಿ 576, ಖಾಸಗಿ ಆಸ್ಪತ್ರೆಯಲ್ಲಿ 329, ಹೋಮ್ ಐಸೋಲೇಷನ್ ನಲ್ಲಿ 401, ಟ್ರಿಯೇಜ್ ನಲ್ಲಿ 334 ಜನರಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 2,020 ಸಕ್ರಿಯ ಪ್ರಕರಣಗಳು ಇವೆ.
https://www.suddikanaja.com/2021/06/17/corona-positivity-decline/