ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಹಿನ್ನೆಲೆ ಜನಸಂಚಾರ ಇಳಿಮುಖಗೊಂಡಿದ್ದಕ್ಕೆ ಸ್ಥಗಿತಗೊಂಡಿದ್ದ ತಾಳಗುಪ್ಪ-ಮೈಸೂರು ರೈಲು ಸಂಚಾರವನ್ನು ಜೂನ್ 24ರಿಂದ ಪುನರ್ ಆರಂಭಿಸಲಾಗುತ್ತಿದೆ.
https://www.suddikanaja.com/2021/06/16/railway-service-starts-from-june-18/
ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದು ಜನಸಂಚಾರ ಯಥಾಸ್ಥಿತಿಗೆ ಮರಳಿದ್ದೇ ರೈಲ್ವೆ ಇಲಾಖೆ ಈ ಹಿಂದೆ ಸ್ಥಗಿತಗೊಂಡಿದ್ದ ರೈಲುಗಳನ್ನು ಒಂದೊಂದೇ ಆರಂಭಿಸುತ್ತಿದೆ. ಈಗ ತಾಳಗುಪ್ಪ-ಮೈಸೂರು ರೈಲು ಸೇವೆಗೆ ಹಸಿರು ನಿಶಾನೆ ತೋರಿಸಿದೆ.
ಇದರಿಂದ ಸಾಂಸ್ಕೃತಿಕ ನಗರಿ ಮತ್ತು ಮಲೆನಾಡಿನ ನಡುವೆ ರೈಲ್ವೆ ಸಂಪರ್ಕ ಸೇತುವೆ ಆರಂಭವಾಗಲಿದೆ.
ರೈಲು ಸಂಖ್ಯೆ 06295 ಮೈಸೂರಿನಿಂದ ತಾಳಗುಪ್ಪ ಹಾಗೂ ರೈಲು ಸಂಖ್ಯೆ 06296 ತಾಳಗುಪ್ಪದಿಂದ ಮೈಸೂರು ರೈಲು ಜೂನ್ 24 ರಿಂದ ಸಂಚರಿಸಲಿದೆ. ಅದೇ ರೀತಿ ಹಲವು ರೈಲ್ವೆಗಳ ಸಂಚಾರಕ್ಕೂ ಹಸರಿ ನಿಶಾನೆ ನೀಡಲಾಗಿದೆ.
ಯಾವ ರೈಲು ಸೇವೆ ಪುನರ್ ಆರಂಭ | ಜೂನ್ 25ನೇ ತಾರೀಕು ರೈಲು ಸಂಖ್ಯೆ 06219 ಚಾಮರಾಜನಗರದಿಂದ ತಿರುಪತಿಗೆ ಹಾಗೂ ಜೂನ್ 26ರಂದು ರೈ. ಸಂಖ್ಯೆ 06220 ತಿರುಪತಿಯಿಂದ ಚಾಮರಾಜನಗರಕ್ಕೆ ಸಂಚರಿಸಲಿದೆ.
ಜೂನ್ 25 ರಿಂದ ರೈಲು ಸಂ.06233 ಮೈಸೂರು- ಚಾಮರಾಜನಗರ ಹಾಗೂ ರೈಲು ಸಂಖ್ಯೆ 06234 ಜೂ.27ರಂದು ಚಾಮರಾಜನಗರ- ಮೈಸೂರು ರೈಲು ಸಂಚರಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
https://www.suddikanaja.com/2021/02/20/vajapeyee-layout-aam-admi-party-demand-for-re-investigation/