ದನ ಕದಿಯಲು ಬಂದವರು ರಿವರ್ಸ್ ಗಿಯರ್‍ನಲ್ಲೇ ಓಡಿಹೋದರು, ಸಿನಿಮೀಯ ರೀತಿಯಲ್ಲಿ ನಡೀತು ಘಟನೆ

 

 

ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ದನ ಕದಿಯಲು ಬಂದಿದ್ದರು ಎನ್ನಲಾದ ವ್ಯಕ್ತಿಗಳು ಕಾರಿನ ರಿವರ್ಸ್ ಗಿಯರ್ ನಲ್ಲೇ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಮಂಗಳವಾರ ಮಧ್ಯರಾತ್ರಿ ಪಟ್ಟಣದ ಕುವೆಂಪು ವೃತ್ತದ ಬಳಿ ಘಟನೆ ನಡೆದಿದೆ. ಜಾನುವಾರು ಅಪಹರಿಸಲು ಕಾರಿನಲ್ಲಿ ಬಂದವರು ಅದೇ ಮಾರ್ಗದಲ್ಲಿ ಬರುತ್ತಿದ್ದ ಸುದೀಪ್ ಶೆಟ್ಟಿ ಹಾಗೂ ಜಾವೇದ್ ಎಂಬುವವರು ಹಿಡಿಯಲು ಯತ್ನಿಸಿದ್ದಾರೆ. ಆಗ ಪರಾರಿಯಾಗುವ ತರಾತುರಿಯಲ್ಲಿ ಸುದೀಪ್ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ನಂತರ, ಕಾರನ್ನು ಹಿಮ್ಮುಖವಾಗಿಯೇ ಓಡಿಸಿಕೊಂಡು ಹೋಗಿದ್ದಾರೆ.

READ | ಮಕ್ಕಳು ಕೊರೊನಾದಿಂದ ಗುಣಮುಖರಾದರೂ 6 ವಾರ ನಿಗಾ, ಈ‌ ಲಕ್ಷಣಗಳಿದ್ದರೆ ನಿರ್ಲಕ್ಷ್ಯ ಬೇಡ

ಲಾಕ್ ಡೌನ್ ಹಿನ್ನೆಲೆ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿದ್ದು ಅದನ್ನೂ ಬೀಳಿಸಿದ್ದಾರೆ. ಪೆÇಲೀಸರಲು ಹಿಡಿಯಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!