ಕೋವ್ಯಾಕ್ಸಿನ್ ಎರಡನೇ ಡೋಸ್ ಲಭ್ಯ, ಇಲ್ಲಿದೆ‌ ಆಸ್ಪತ್ರೆಗಳ ಪಟ್ಟಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದು 28 ದಿನ ಕಳೆದಿರುವವರಿಗೆ ಎರಡನೇ ಡೋಸ್ ಲಭ್ಯವಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ನಾಗರಾಜ್ ನಾಯಕ್ ತಿಳಿಸಿದ್ದಾರೆ.

READ | ಹುಣಸೋಡು ಬ್ಲಾಸ್ಟ್ ಕೇಸ್, ಐದು ಜನರಿಗೆ ಸಿಕ್ತು ಬೇಲ್, ಉಳಿದವರದ್ದು ರಿಜೆಕ್ಟ್

ಆಸ್ಪತ್ರೆಗಳ ಪಟ್ಟಿ | ಶಿವಮೊಗ್ಗ ನಗರದ ಸಿಮ್ಸ್, ಕೋಟೆ ಪಿಎಚ್‍ಸಿ, ಸೀಗೆಹಟ್ಟಿ ಪಿಎಚ್‍ಸಿ, ಸಾಗರದ ಯುಬಿಎಚ್‍ಸಿ ಸುಭಾಷ್ ನಗರ, ಶಿಕಾರಿಪುರದ ಯುಬಿಎಚ್‍ಸಿ ಚನ್ನಕೇಶವ ನಗರ , ಪಿಎಚ್‍ಸಿ ಬಿಳಕಿ, ಹರಿಗೆ ಮತ್ತು ಸೊರಬದ ಜನರಲ್ ಆಸ್ಪತ್ರೆ ಲಭ್ಯವಿದೆ. ಈಗಾಗಲೇ ಮೊದಲ ಡೋಸ್ ಪಡೆದು ನಿಗದಿತ ಅವಧಿ ಮುಗಿದವರು ತಮ್ಮ ಗುರುತಿನ ಚೀಟಿ ತೋರಿಸಿ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

error: Content is protected !!