ಕೊರೊನಾ ಸೋಂಕಿತರ ಸ್ಯಾಂಪಲ್ ಪರೀಕ್ಷೆಯಲ್ಲಿ ಏರಿಕೆ, ಪಾಸಿಟಿವಿಟಿ ದರ ಇಳಿಕೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೂ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ, ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಾದರಿ ಸಂಗ್ರಹದಲ್ಲೂ ಏರಿಕೆಯಾಗಿದೆ.

READ | ಕುವೆಂಪು ವಿವಿಯಲ್ಲಿ ಆನ್‍ಲೈನ್ ಕೋರ್ಸ್ ಆರಂಭಕ್ಕೆ ಯುಜಿಸಿ ಗ್ರೀನ್ ಸಿಗ್ನಲ್, ಇದರಿಂದ ಮಲೆನಾಡಿನ ವಿದ್ಯಾರ್ಥಿಗಳಿಗೇನು ಲಾಭ?

ಶುಕ್ರವಾರ 4,783 ಮಾದರಿಗಳನ್ನು ಸಂಗ್ರಹಿಸಿದ್ದು, 3,896 ವರದಿಗಳು ನೆಗೆಟಿವ್ ಬಂದಿವೆ. ಇಂದು 195 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅದರಲ್ಲಿ 4 ವಿದ್ಯಾರ್ಥಿಗಳು, ಇಬ್ಬರು ಸಿಬ್ಬಂದಿ ಇದ್ದಾರೆ. 724 ಜನ ಗುಣಮುಖರಾಗಿದ್ದಾರೆ. ಐದು ಜನ ಮೃತಪಟ್ಟಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 87, ಭದ್ರಾವತಿ 54, ತೀರ್ಥಹಳ್ಳಿ 16, ಶಿಕಾರಿಪುರ 11, ಸಾಗರ 6, ಹೊಸನಗರ 8, ಸೊರಬ 6, ಬಾಹ್ಯ ಜಿಲ್ಲೆಯ 7 ಸೋಂಕಿತರಿದ್ದಾರೆ.
ಸಕ್ರಿಯ ಪ್ರಕರಣದಲ್ಲೂ ಇಳಿಕೆ | ಮೆಗ್ಗಾನ್ ಆಸ್ಪತ್ರೆಯಲ್ಲಿ 352, ಡಿಸಿಎಚ್‍ಸಿನಲ್ಲಿ 163, ಕೋವಿಡ್ ಕೇರ್ ಸೆಂಟರ್‍ನಲ್ಲಿ 895, ಖಾಸಗಿ ಆಸ್ಪತ್ರೆಯಲ್ಲಿ 533, ಹೋಮ್ ಐಸೋಲೇಷನ್‍ನಲ್ಲಿ 789, ಟ್ರಿಯೇಜ್‍ನಲ್ಲಿ 426 ಜನರು ಚಿಕಿತ್ಸೆ ಪಡೆಯುತ್ತಿದ್ದು, 3,158 ಸಕ್ರಿಯ ಪ್ರಕರಣಗಳಿವೆ.

https://www.suddikanaja.com/2021/04/05/fraud-in-police-exam/

error: Content is protected !!