ರೈಲಿಗೆ ಸಿಲುಕಿ ಕೈ, ಕಾಲು ತುಂಡಾದ ಯುವಕ ಮಂಗಳೂರಿಗೆ ಶಿಫ್ಟ್, ಆರೋಗ್ಯ ಹೇಗಿದೆ?

 

 

ಸುದ್ದಿ ಕಣಜ.ಕಾಂ
ಸಾಗರ: ಕಾಲು ಜಾರಿ ತಾಳಗುಪ್ಪ ರೈಲು ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ಕೈ, ಕಾಲು ಕಳೆದುಕೊಂಡಿರುವ ಯುವಕನನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಸಿದ್ದಾಪುರದ ನವೀನ್ (18) ಎಂಬಾತನೇ ತಾಳಗುಪ್ಪ-ಬೆಂಗಳೂರು ರೈಲಿಗೆ ಸಿಲುಕಿ ತೀವ್ರ ಗಾಯಗೊಂಡಿದ್ದ ತಕ್ಷಣ ಆತನಿಗೆ ಸಾಗರದ ಉಪ ವಿಭಾಗ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು. ಈಗ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

error: Content is protected !!