ಜೋಗ, ಕುಪ್ಪಳಿ ಓಪನ್, ಪ್ರವಾಸಿಗರು ಬರುವ ಮುನ್ನ ಇದನ್ನು ಓದಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಲಾಕ್ ಡೌನ್ ಹಿನ್ನೆಲೆ ಮಲೆನಾಡಿನ ಪ್ರವಾಸಿ ತಾಣಗಳ ಭೇಟಿಗೆ ನಿಷೇಧ ಹೇರಲಾಗಿತ್ತು. ಆದರೆ, ಸೋಂಕು ಇಳಿಮುಖವಾಗುತ್ತಿದ್ದಂತೆಯೇ ರಾಜ್ಯ ಸರ್ಕಾರ ಲಾಕ್‍ಡೌನ್ ನಲ್ಲಿ ಹಲವು ಸಡಿಲಿಕೆಗಳನ್ನು ಮಾಡಿದೆ. ಹೀಗಾಗಿ, ಜೂನ್ 28ರಿಂದ ಎಲ್ಲ ಪ್ರವಾಸಿಗಳನ್ನು ಓಪನ್ ಮಾಡಲಾಗಿದೆ.
ಪ್ರವಾಸಿಗರ ಅಚ್ಚು ಮೆಚ್ಚಿನ ತಾಣ ಜೋಗ ಮತ್ತು ಕುಪ್ಪಳಿಯ ಕವಿಶೈಲ, ಕವಿ ಮನೆಯನ್ನು ವೀಕ್ಷಿಸುವುದಕ್ಕೂ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ.
ಕೋವಿಡ್ ಮಾರ್ಗಸೂಚಿ ಅನ್ವಯ | ಮಲೆನಾಡಿನ ಸೊಬಗು ಸವಿಯಲು ಬರುವ ಎಲ್ಲ ಪ್ರವಾಸಿಗರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಲೇಬೇಕು ಎಂದು ಸೂಚನೆ ನೀಡಲಾಗಿದೆ.

error: Content is protected !!