ಜೂನ್‌ 6ರಂದು ಶಿವಮೊಗ್ಗದ ಈ ಪ್ರದೇಶದಲ್ಲಿ ಕರೆಂಟ್ ಇರಲ್ಲ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಜೂನ್ 6 ರಂದು ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಂಆರ್‌ಎಸ್ ವಿದ್ಯುತ್ ವಿತರಣೆ ಕೇಂದ್ರದಿಂದ ಸರಬರಾಜಾಗುವ ಎಫ್ 4 ಫೀಡರ್‌ಗೆ ಸಂಬಂಧಿಸಿದಂತೆ ಗಾಂಧಿ ಪಾರ್ಕ್ ಎದುರು ಬಸವೇಶ್ವರ ಪುತ್ಥಳಿ ಅಳವಡಿಕೆ ಕಾರ್ಯದ ಪ್ರಯುಕ್ತ ಸ್ಪನ್‌ಪೋಲ್ ಹಾಗೂ ಭೂಗತ ಕೇಬಲ್ ಅಳವಡಿಕೆ ಕಾರ್ಯ ಇರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ಕರೆಂಟ್ ಕಟ್ | ಡಿವಿಎಸ್ ವೃತ್ತ, ಎನ್‌ಇಎಸ್ ಕಾಲೇಜು, ಕುವೆಂಪು ರಂಗಮಂದಿರ, ಲೂರ್ದು ನಗರ, ಬಿಎಚ್ ರಸ್ತೆ, ಮಹಾನಗರ ಪಾಲಿಕೆ, ಸಿಟಿ ಕ್ಲಬ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

error: Content is protected !!