ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 24 ಸಾವಿರ ಜನರಿಗೆ ಉಚಿತ ಚಿಕಿತ್ಸೆ, 45 ಸಾವಿರ ಫುಡ್ ಕಿಟ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪಾಲಿಕೆ ವ್ಯಾಪ್ತಿಯಲ್ಲಿ 25 ಸಾವಿರ ಜನರಿಗೆ ಕೋವಿಡ್ ವ್ಯಾಕ್ಸಿನ್ ಹಾಕಿಸುವ ಚಿಂತನೆ ನಡೆದಿದೆ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್‍ಎನ್. ಚನ್ನಬಸಪ್ಪ ಹೇಳಿದರು.

https://www.suddikanaja.com/2021/06/02/police-shock-to-public-who-came-for-walking/

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಖ್ಯಾತ ವೈದ್ಯರು ಮತ್ತು ಇತರರ ಸಹಾಯ ಪಡೆದು ಎಲ್ಲರ ನೆರವಿನಿಂದ ಲಸಿಕೆ ಹಾಕಿಸುವ ಆಲೋಚನೆಯಿದೆ. ಈಗ ಲಸಿಕೆ ಹಾಕಿಸುವ ಕೇಂದ್ರಗಳು ಕಡಿಮೆಯಿದ್ದು, ಅವುಗಳನ್ನು ಕೂಡ ಹೆಚ್ಚಿಸುವ ಪ್ರಯತ್ನ ನಡೆದಿದೆ ಎಂದರು.
ಫುಡ್ ಕಿಟ್ ವಿತರಣೆ | ಮೊದಲನೇ ಅಲೆಯಲ್ಲಿ 40 ಸಾವಿರಕ್ಕೂ ಹೆಚ್ಚು ದಿನಸಿ ಕಿಟ್‍ನ್ನು ಬಡವರಿಗೆ ನೀಡಲಾಗಿತ್ತು. ಈ ಸಲವೂ 45 ಸಾವಿರ ಬಡವರನ್ನು ಗುರುತಿಸಿ ದಿನಸಿ ಕಿಟ್ ವಿತರಣೆ ಮಾಡಲಾಗುವುದು.
ಟೆಂಡರ್ ಪ್ರಕ್ರಿಯೆ ಜೂನ್ 9ಕ್ಕೆ ಪೂರ್ಣಗೊಳ್ಳಲಿದ್ದು, ಆನಂತರ ಒಂದೆರೆಡು ದಿನಗಳಲ್ಲಿ ಕಿಟ್ ನೀಡಲು ಆರಂಭಿಸಲಾಗುವುದು ಎಂದು ಹೇಳಿದರು.
ಬಿಜೆಪಿ ನಗರಾಧ್ಯಕ್ಷ ಎನ್.ಜಿ.ಜಗದೀಶ್, ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಪಾಲಿಕೆ ಸದಸ್ಯರಾದ ಎಸ್.ಜ್ಞಾನೇಶ್ವರ್, ಅನಿತಾ ರವಿಶಂಕರ್, ಈ.ವಿಶ್ವಾಸ್, ಸುವರ್ಣ ಶಂಕರ್, ಸುರೇಖಾ ಮುರುಳೀಧರ್, ಧೀರರಾಜ್ ಹೊನ್ನವಿಲೆ ಉಪಸ್ಥಿತರಿದ್ದರು.

https://www.suddikanaja.com/2021/05/29/food-kit-distribution-in-bhadravathi-high-risk-area/

error: Content is protected !!