ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿನ ಸಂಘ ಸಂಸ್ಥೆಗಳ ನೋಂದಣಿ ಕಾಯ್ದೆ 1960 ಅಡಿ ಐದು ವರ್ಷಗಳಿಗೂ ಮೇಲ್ಪಟ್ಟು ನವೀಕರಿಸದೇ, ಫೈಲಿಂಗ್ ಮಾಡದೇ ಇರುವ ಸಂಘ ಸಂಸ್ಥೆಗಳ ಸದಸ್ಯರ ಹಿತದೃಷ್ಟಿಯಿಂದ ಪ್ರತಿ ವರ್ಷಕ್ಕೆ 2,000 ರೂಪಾಯಿಗಳ ಹೆಚ್ಚುವರಿ ದಂಡ ಪಾವತಿಸಿ ನವೀಕರಣ,ಫೈಲಿಂಗ್ ಮಾಡಿಸಿಕೊಳ್ಳಲು ಡಿಸೆಂಬರ್ 31ರ ವರೆಗೆ ಅವಕಾಶ ನೀಡಲಾಗಿದೆ.
ನೋಂದಣಿ ಬಾಕಿಯಿರುವ ಸಂಘ ಸಂಸ್ಥೆಗಳು ತಮ್ಮ ಸಂಘದ ದಾಖಲೆ ಮತ್ತು ಮಾಹಿತಿಗಳೊಂದಿಗೆ ಜಿಲ್ಲಾ ನೋಂದಣಾಧಿಕಾರಿಗಳ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು, ಶಿವಮೊಗ್ಗ ಕಚೇರಿಯಲ್ಲಿ ಫೈಲಿಂಗ್ ಮಾಡುವಂತೆ ಸಂಘಗಳ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.