ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಫ್ 12, 13 ಮತ್ತು 19ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 18ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ನಗರ ಉಪ ವಿಭಾಗ 3ರ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ | ಆಲ್ಕೋಳ ನಂದಿನಿ ಬಡಾವಣೆ, ವಿಕಾಸ ಶಾಲೆ ಹತ್ತಿರ, ಕನಕ ಲೇಔಟ್, ಸಿದ್ಧಗಂಗಾ ಬಡಾವಣೆ, ಕಾಶಿಪುರ, ಜೆ.ಎಚ್.ಪಟೇಲ್ ಬಡಾವಣೆ ಎ, ಬಿ, ಸಿ, ಡಿ, ಇ ಮತ್ತು ಎಫ್ ಬ್ಲಾಕ್, ಸಹಕಾರಿ ನಗರ, ಗೋಕುಲ್ ಲೇಔಟ್, ದೀಪಕ್ ಲೇಔಟ್, ಸೋಮಿನಕೊಪ್ಪ, ಪಶು ವೈದ್ಯಕೀಯ ಕಾಲೇಜು, ಹನುಮಂತ ನಗರ, ಅಂಬೇಡ್ಕರ್ ಕಾಲೊನಿ, ಜಲ್ಲಿ ಕ್ರಶರ್ಸ್, ಶಿವ ಸಾಯಿ ಕ್ಯಾಸ್ಟಿಂಗ್, ಗೆಜ್ಜೆನಹಳ್ಳಿ, ದೇವಕಾತಿಕೊಪ್ಪ, ಬೈರನಕೊಪ್ಪ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.