ಸುದ್ದಿ ಕಣಜ.ಕಾಂ
ಶಿವಮೊಗ್ಗ: ನವುಲೆಯಲ್ಲಿರುವ ಕೆ.ಎಸ್.ಸಿ.ಎ ಕ್ರೀಡಾಂಗಣ ಅಕ್ಷರಶಃ ಸ್ವಿಮ್ಮಿಂಗ್ ಪೂಲ್ ನಂತಾಗಿದೆ. ಶುಕ್ರವಾರ ಸುರಿದ ಧಾರಾಕಾರ ಮಳೆಗೆ ಕೆರೆಯ ನೀರು ಕ್ರೀಡಾಂಗಣಕ್ಕೆ ನುಗ್ಗಿದ್ದು, ಪಿಚ್ ಸಂಪೂರ್ಣ ಹಾಳಾಗಿದೆ.
ಕೆರೆಯ ಜಾಗದಲ್ಲಿ ಸ್ಟೇಡಿಯಂ | ಈ ಮುಂಚೆ 47 ಎಕರೆಯಷ್ಟಿದ್ದ ನವುಲೆ ಕೆರೆಯ ಜಾಗದಲ್ಲಿ 27 ಎಕರೆಯನ್ನು ಕೆ.ಎಸ್.ಸಿ.ಎಗೆ ಮಾರಾಟ ಮಾಡಲಾಗಿದೆ. ಪ್ರತಿ ಸಲ ಮಳೆ ಬಂದಾಗಲೂ ಕ್ರೀಡಾಂಗಣ ಜಲಾವೃತವಾಗುತ್ತದೆ.