ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಹಿನ್ನೆಲೆ ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸುವ ಪ್ರಸಿದ್ಧ ಗುಡ್ಡೇಕಲ್ ಜಾತ್ರೆಯನ್ನು ರದ್ದುಪಡಿಸಲಾಗಿದೆ.
ನಗರದ ಗುಡ್ಡೆಕಲ್ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಆಡಿಕೃತ್ತಿಕೆ ಹರೋಹರ ಜಾತ್ರೆಯನ್ನು ರದ್ದು ಮಾಡಲಾಗಿದೆ. ಜಾತ್ರೆಗೆ ದೇಶಾದ್ಯಂತ ಭಕ್ತರು ಬರಲಿದ್ದು, ಹರಕೆ ತೀರಿಸಲು ಕಾವಡಿ ಹೊತ್ತು ಬರುತ್ತಾರೆ. ಕೊರೊನಾ ಸೋಂಕು ಪೂರ್ಣ ಪ್ರಮಾಣದಲ್ಲಿ ಕಡಿಮೆ ಆಗದೇ ಇರುವುದರಿಂದ ಜಾತ್ರೆ ಸೇರುವುದು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಜಾತ್ರೆ ರದ್ದು ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ಪಿ.ರಘುಕುಮಾರ್ ತಿಳಿಸಿದ್ದಾರೆ.
READ | ಮಳೆ ತಗ್ಗಿದರೂ ಕುಸಿಯುತ್ತಿವೆ ಗುಡ್ಡ, ಆತಂಕದಲ್ಲಿ ಮಲೆನಾಡಿನ ಜನ, ಎಲ್ಲೆಲ್ಲಿ ಏನೇನು ಹಾನಿ
ಆಗಸ್ಟ್ 1 ಮತ್ತು 2 ರಂದು ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದ್ದು, ಯಾವುದೇ ಕಾರಣಕ್ಕೂ ಭಕ್ತರು ಹರಕೆ ತೀರಿಸಲು ದೇವಸ್ಥಾನಕ್ಕೆ ಬರಕೂಡದು ಎಂದುಮನವಿ ಮಾಡಲಾಗಿದೆ.