ಸುದ್ದಿ ಕಣಜ.ಕಾಂ
ಶಿವಮೊಗ್ಗ: ಎಡೆಬಿಡದೆ ಸುರಿದ ಮಳೆ ಜಿಲ್ಲೆಯಲ್ಲಿ ಶಾಂತವಾಗಿದೆ. ಶಿವಮೊಗ್ಗ ನಗರದಲ್ಲಿ ಶನಿವಾರ ಸಂಜೆ ಅಲ್ಪ ಮಳೆಯಾಗಿದ್ದು, ಭಾನುವಾರ ಬೆಳಗ್ಗೆಯಿಂದಲೇ ಬಿಸಿಲು ಇದೆ.
ಕಳೆದ 24 ಗಂಟೆಗಳಲ್ಲಿ ಹೊಸನಗರದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇನ್ನುಳಿದ ತಾಲೂಕುಗಳಲ್ಲಿ ವರ್ಷಧಾರೆ ಇಳಿಮುಖವಾಗಿದೆ.
ತಾಲೂಕುವಾರು ಮಳೆ ವಿವರ | ಶಿವಮೊಗ್ಗ 9.6 ಎಂಎಂ, ಭದ್ರಾವತಿ 8.8 ಎಂಎಂ, ತೀರ್ಥಹಳ್ಳಿ 100.8 ಎಂಎಂ, ಸಾಗರ 28.4 ಎಂಎಂ, ಶಿಕಾರಿಪುರ 7.2 ಎಂಎಂ, ಸೊರಬ 16.3 ಎಂಎಂ, ಹೊಸನಗರ 141.6 ಎಂಎಂ ಮಳೆ ಸುರಿದಿದೆ.
READ | ಮಳೆ ತಗ್ಗಿದರೂ ಕುಸಿಯುತ್ತಿವೆ ಗುಡ್ಡ, ಆತಂಕದಲ್ಲಿ ಮಲೆನಾಡಿನ ಜನ, ಎಲ್ಲೆಲ್ಲಿ ಏನೇನು ಹಾನಿ
ಜಲಾಶಯಗಳಲ್ಲಿ ನೀರಿನ ಮಟ್ಟ | ಲಿಂಗನಮಕ್ಕಿಯಲ್ಲಿ 1803.85 ಅಡಿ ಹಾಗೂ ಭದ್ರಾ ಡ್ಯಾಂನಲ್ಲಿ 177.6 ಅಡಿ ನೀರಿದೆ.