ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆನ್ಲೈನ್ ನಲ್ಲಿ ಗೋಣಿ ಚೀಲ ಖರೀದಿಸುವುದಕ್ಕಾಗಿ 1,13,720 ರೂಪಾಯಿ ಕಳುಹಿಸಿ ಮೋಸ ಹೋದ ಘಟನೆ ವರದಿಯಾಗಿದೆ.
ಕಾರಾಗೃಹ ಬಂಧಿಗಳೊಡನೆ ವಿಡಿಯೋ ಕಾಲ್ಗೆ ಅವಕಾಶ, ಸೆಂಟ್ರಲ್ ಜೈಲಿನಿಂದ ವಿನೂತನ ಹೆಜ್ಜೆ
ಶಿಕಾರಿಪುರದ ಶಿಕ್ಷಕರೊಬ್ಬರು ಮೋಸ ಹೋಗಿದ್ದಾರೆ. ಇವರು ಗೂಗಲ್ ನಲ್ಲಿ ಖಾಲಿ ಗೋಣಿ ಚೀಲ ಖರೀದಿ ಮಾಡುವ ವ್ಯಾಪಾರದ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಆಗ ಆನ್ಲೈನ್ ಟ್ರೇಡಿಂಗ್ ವೆಬ್ಸೈಟ್ ವೊಂದು ಲಭಿಸಿದೆ. ಅದಕ್ಕೆ ಇಮೇಲ್ ಕೂಡ ಮಾಡಿದ್ದಾರೆ. ಆಗ ಏಪ್ರಿಲ್ 11ರಂದು ಇನ್ನೊಂದು ಇಮೇಲ್ ಐಡಿಯಿಂದ ಪ್ರತಿಕ್ರಿಯೆ ಬಂದಿದೆ. ಇಮೇಲ್ ಸಂದೇಶದಲ್ಲಿ ವ್ಯಕ್ತಿಯೊಬ್ಬರು ಕಂಪೆನಿಯೊಂದರ ವ್ಯವಸ್ಥಾಪಕ ನಿರ್ದೇಶಕ ಎಂದು ಪರಿಚಯಿಸಿಕೊಂಡಿದ್ದಾರೆ. ನಂತರ, ಇಮೇಲ್ ನಲ್ಲಿಯೇ ಪರಸ್ಪರ ಮಾತುಕತೆ ಕೂಡ ನಡೆಸಿದ್ದಾರೆ.
ಅದರಂತೆ, ದೆಹಲಿಯ ಬ್ಯಾಂಕ್ ವೊಂದರ ಖಾತೆಯಿಂದ ಖಾತೆ ಸಂಖ್ಯೆ ಕಳುಹಿಸಿ ಅದಕ್ಕೆ ಹಣ ವರ್ಗಾವಣೆ ಮಾಡುವಂತೆ ಸೂಚಿಸಲಾಗಿದೆ. ಶಿಕಾರಿಪುರದ ಶಿಕ್ಷಕರು ಎಲ್ಲವನ್ನೂ ನಂಬಿ ತಾನು ಖರೀದಿಸಲು ಉದ್ದೇಶಿಸಿದ್ದ 26 ಟನ್ ಗೋಣಿ ಚೀಲದ ಹಣದಲ್ಲಿ ಅರ್ಧದಷ್ಟು ಹಣ ಅಂದರೆ, 1,13,720 ರೂಪಾಯಿಯನ್ನು ಮುಂಗಡವಾಗಿ ಕಳುಹಿಸಿದ್ದಾರೆ.
ಅನುಮಾನ ಬಂದಿದ್ದು ಹೇಗೆ?
ವ್ಯವಸ್ಥಾಪಕ ನಿರ್ದೇಶಕ ಎಂದು ಹೇಳಿಕೊಂಡಿದ್ದ ವ್ಯಕ್ತಿಯು ತಮ್ಮ ವಾಟ್ಸಾಪ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ. ಗೋಣಿ ಚೀಲ ಕಳುಹಿಸಬೇಕಾದರೆ ಅದಕ್ಕೆ ಸಾಗಾಣಿಕೆ ವೆಚ್ಚವಾಗಿ ಮತ್ತೆ ಹಣವನ್ನು ಹಾಕುವಂತೆ ಕೇಳಿದ್ದಾರೆ. ಆಗ ಅನುಮಾನ ಬಂದು ತಮ್ಮ ಸ್ನೇಹಿತರೊಬ್ಬರಿಗೆ ವಿಚಾರವನ್ನು ಹಂಚಿಕೊಂಡಿದ್ದಾರೆ. ಆಗ ಮೋಸ ಹೋಗಿರುವುದು ಗೊತ್ತಾಗಿದೆ. ಪ್ರತಿಷ್ಠಿತ ಕಂಪೆನಿಯೊಂದರ ಹೆಸರನ್ನು ಬಳಸಿ ಮೋಸ ಮಾಡಿರುವುದಾಗಿ ಶಿವಮೊಗ್ಗದ ಎಸ್.ಇ.ಎನ್. ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
12.50 ಲಕ್ಷ ರೂ. ಗಿಫ್ಟ್ ಓಚರ್ ಪಡೆಯಲು ಹೋಗಿ ಮೂರು ಲಕ್ಷ ರೂ. ಕಳೆದುಕೊಂಡ ಮಹಿಳೆ