ಲಂಡನ್ ನಿಂದ ಬಂದ ಬಸವಣ್ಣನ ಪುತ್ಥಳಿಗೆ ಶಿವಮೊಗ್ಗದೊಂದಿಗೆ ‘ಗುರುವಾರ’ದ ತಳಕು! ಏನಿದು ವಾರ ವೈಶಿಷ್ಟ್ಯ?

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಅದು 2018ರ ನವೆಂಬರ್ 22ರ ಗುರುವಾರ, ಆ ಸುಗಳಿಗೆಯಲ್ಲಿ ಕಾಯಕ ಯೋಗಿ ಬಸವೇಶ್ವರರ ಪುತ್ಥಳಿ‌ ಶಿವಮೊಗ್ಗ ನಗರಕ್ಕೆ ಆಗಮಿಸಿತ್ತು. ಸ್ಥಾಪನೆಗಾಗಿ ಹಲವು ಸಂಘರ್ಷಗಳೇ ನಡೆದವು. ಎರಡೂವರೆ ವರ್ಷಗಳ‌ನಂತೆ ಕಾಕತಾಳಿಯವೆಂಬಂತೆ ಸಿಎಂ ಯಡಿಯೂರಪ್ಪ ಅವರು ಸ್ಥಾಪನೆಗೆ ಗುರುವಾರವೇ ಗ್ರೀನ್ ಸಿಗ್ನಲ್ ನೀಡಿದ್ದಾರೆ.

https://www.suddikanaja.com/2020/11/10/netherlands-parcel/

ಬೆಂಗಳೂರಿನಲ್ಲಿ ಗುರುವಾರ ಕರೆದಿದ್ದ ಸಚಿವ ಸಂಪು ಸಭೆಯಲ್ಲಿ ಈ‌ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಆಗ ಲಂಡನ್ ನ ಲ್ಯಾಂಬೇತಿನ ಮಾಜಿ ಮೇಯರ್ ಹಾಗೂ ಭಾರತ ಸಂಜಾತ ನೀರಜ್ ಪಾಟೀಲ್ ಅವರು ಕೊಡುಗೆ ರೂಪದಲ್ಲಿ ನೀರಿದ್ದ ಬಸವೇಶ್ವರರ ಪುತ್ಥಳಿ‌ ಸ್ಥಾಪನೆಗೆ ಸ್ಥಳ ನಿಗದಿಯಾಗಿದ್ದರೂ ಅನಾವರಣ ಆಗಿರಲಿಲ್ಲ. ಆದರೆ, ಆ ಗಳಿಗೆ ಈಗ ಕೂಡಿ ಬಂದಿದೆ.

ಗಾಂದಿ ಪಾರ್ಕ್ ಮುಂಭಾಗದಲ್ಲಿ ಅಣ್ಣನ ಪುತ್ಥಳಿ‌ | ಶಿವಮೊಗ್ಗ ನಗರದಲ್ಲಿ ಜಗಜ್ಯೋತಿ ಬಸವಣ್ಣನ ಚೊಚ್ಚಲ‌ ಪುತ್ಥಳಿ ಅನಾವರಣಕ್ಕೆ ಒಪ್ಪಿಗೆ ದೊರೆತಿದ್ದು, ಈಗಾಗಲೇ ಗಾಂಧಿ ಪಾರ್ಕ್ ಮುಂದೆ ಎಲ್ಲ‌ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಈ ಪುತ್ಥಳಿ ಸ್ಥಾಪನೆಗೋಸ್ಕರ ಪಾಲಿಕೆ ಸದಸ್ಯ ಎಚ್.ಸಿ.ಯೋಗೇಶ್ ಅವರು ಅಹರ್ನಿಷಿ ಪ್ರಯತ್ನಿಸಿದ್ದಾರೆ. ಪಾಲಿಕೆ ಸಭೆಗಳಲ್ಲಿ ಇದರ ಪರ ದನಿ ಎತ್ತಿದ್ದಾರೆ. ಕೊನೆಗೂ ಪುತ್ಥಳಿ ಸ್ಥಾಪನೆಗೆ ಗಳಿಕೆ ಫಿಕ್ಸ್ ಆಗಿದೆ.

https://www.suddikanaja.com/2021/06/04/current-shock-death/

error: Content is protected !!