COURT NEWS | ಬಾಲಕಿಯೊಂದಿಗೆ ದೈಹಿಕ ಸಂಬಂಧ ಹೊಂದಿ ವಿವಾಹವಾದವನಿಗೆ 10 ವರ್ಷ ಜೈಲು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಹೊಂದಿ ನಂತರ ವಿವಾಹವಾದ ಯುವಕನಿಗೆ 10 ವರ್ಷ ಜೈಲು, 10 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಯಲವಟ್ಟಿ ತಾಂಡದ ಎಸ್.ಆರ್.ಬೀರೇಶ್ (30) ಎಂಬುವವರಿಗೆ ಶಿಕ್ಷೆ ವಿಧಿಸಲಾಗಿದೆ. ವಿವಾಹಕ್ಕೂ ಮುನ್ನವೇ ದೈಹಿಕ ಸಂಪರ್ಕ ಹೊಂದಿ ಗರ್ಭಿಣಿಯಾದ ಕಾರಣಕ್ಕೆ ಭದ್ರಾವತಿಯ ಚೌಡೇಶ್ವರಿ ದೇವಸ್ಥಾನದಲ್ಲಿ ವಿವಾಹವಾದ ಬಗ್ಗೆ ಮಾಹಿತಿ ಸಿಕ್ಕದ್ದು, ಯುವಕನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಠಾಣೆಯಲ್ಲಿ ಐಪಿಸಿ ಕಲಂ 366, 376(2), ಪೋಕ್ಸೊ ಕಾಯ್ದೆ, ಬಾಲ್ಯ ವಿವಾಹ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಎಫ್.ಎಸ್.ಟಿ.ಸಿ 1 ನ್ಯಾಯಾಲಯ ನ್ಯಾಯಾಧೀಶ ದಯಾನಂದ್ ಅವರು ತೀರ್ಪು ನೀಡಿದ್ದಾರೆ.

error: Content is protected !!