ಭದ್ರಾವತಿಯಲ್ಲಿ ಇಂದು ಕೊರೊನಾ ಪಾಸಿಟಿವ್ ಸಂಖ್ಯೆ ಭಾರಿ ಇಳಿಕೆ, ಉಳಿದ ತಾಲೂಕುಗಳಲ್ಲಿ ಎಷ್ಟು ಪ್ರಕರಣಗಳಿವೆ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಇಳಿಕೆಯಾಗಿದೆ. ಭಾನುವಾರ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಭದ್ರಾವತಿಯಲ್ಲಿ ಬರೀ ನಾಲ್ಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

https://www.suddikanaja.com/2021/07/10/covid-relief-in-shivamogga/

ತಾಲೂಕುವಾರು ವರದಿ‌ | ಶಿವಮೊಗ್ಗದಲ್ಲಿ‌ 23, ಶಿಕಾರಿಪುರ 2, ತೀರ್ಥಹಳ್ಳಿ 3, ಸೊರಬ 1, ಹೊಸನಗರ 6, ಸಾಗರ 5, ಬಾಹ್ಯ ಜಿಲ್ಲೆಯ 3 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ಜಿಲ್ಲೆಯಲ್ಲಿ 47 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 111 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ.

READ | ಟಿಪ್ಪು ಸುಲ್ತಾನ್ ಜನ್ಮ ದಿನಾಂಕದ ಬಗ್ಗೆ ಹೊಸ ಸಂಶೋಧನೆ, ವಿಶ್ವವನ್ನೇ ಬೆಚ್ಚಿ ಬೀಳಿಸಲಿದೆ ಈ ಅಧ್ಯಯನ, ಹಾಗಾದರೆ ಟಿಪ್ಪು ನೈಜ ಜನ್ಮ ದಿನಾಂಕ ಯಾವುದು?

ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 1,922 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಹಳೆಯದ್ದೂ ಸೇರಿ ಒಟ್ಟು 3,319 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
ಎಲ್ಲಿ ಎಷ್ಟು ಜನ ಚಿಕಿತ್ಸೆ | ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 133 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್‍ಸಿ 73, ಕೋವಿಡ್ ಕೇರ್ ಸೆಂಟರ್ ನಲ್ಲಿ 96, ಖಾಸಗಿ ಆಸ್ಪತ್ರೆಯಲ್ಲಿ 81, ಹೋಮ್ ಐಸೋಲೇಷನ್ ನಲ್ಲಿ 287 ಹಾಗೂ ಟ್ರಿಯೇಜ್ ಕೇಂದ್ರದಲ್ಲಿ 29 ಸೋಂಕಿತರಿದ್ದಾರೆ. 699 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.

https://www.suddikanaja.com/2021/05/30/covid-second-wave-hit-shivamogga/

error: Content is protected !!