ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಪಾಸಿಟಿವ್ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದ್ದು, ಸೋಮವಾರ ಎಲ್ಲ ತಾಲೂಕುಗಳು ಸೇರಿಯೂ ಸೋಂಕಿತರ ಸಂಖ್ಯೆ ನೂರು ದಾಟಿಲ್ಲ.
https://www.suddikanaja.com/2020/11/11/cm-formula-does-to-increase-the-punishment-act/
ಇಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜಿಲ್ಲೆಯಲ್ಲಿ ಕೇವಲ 90 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 103 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಮೂರು ಜನ ಮೃತಪಟ್ಟಿದ್ದಾರೆ. ಪಾಸಿಟಿವ್ ಸಂಖ್ಯೆಯಲ್ಲಿ ನಿರಂತರ ಇಳಿಕೆಯಾಗುತ್ತಿದ್ದು, ಸಕ್ರಿಯ ಪ್ರಕರಣಗಳೂ ಕಡಿಮೆಯಾಗಿವೆ.
ಜಿಲ್ಲೆಯಲ್ಲಿ ಪ್ರಸ್ತುತ 872 ಸಕ್ರಿಯ ಪ್ರಕರಣಗಳಿದ್ದು, ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 119 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್ಸಿ 76, ಕೋವಿಡ್ ಕೇರ್ ಸೆಂಟರ್ ನಲ್ಲಿ 170, ಖಾಸಗಿ ಆಸ್ಪತ್ರೆಯಲ್ಲಿ 118, ಹೋಮ್ ಐಸೋಲೇಷನ್ ನಲ್ಲಿ 368 ಹಾಗೂ ಟ್ರಿಯೇಜ್ ಕೇಂದ್ರದಲ್ಲಿ 21 ಸೋಂಕಿತರಿದ್ದಾರೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 4,553 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. 2,667 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
ತಾಲೂಕುಗಳಲ್ಲೂ ಪ್ರಕರಣಗಳು ಇಳಿಕೆ | ಆರಂಭದಿಂದಲೂ ಶಿವಮೊಗ್ಗ 25 ಭದ್ರಾವತಿ 23, ಶಿಕಾರಿಪುರ 8, ತೀರ್ಥಹಳ್ಳಿ 12, ಸೊರಬ 8, ಹೊಸನಗರ 8, ಸಾಗರ 3, ಬಾಹ್ಯ ಜಿಲ್ಲೆಯ 3 ಸೋಂಕಿತರಿದ್ದಾರೆ.
https://www.suddikanaja.com/2021/06/28/covid-cases-decline-in-shivamogga-3/