ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ಎರಡೂವರೆ ತಿಂಗಳುಗಳಿಂದ ಕೊರೊನಾ ಸೋಂಕು ಶಿವಮೊಗ್ಗಕ್ಕೆ ಕಾಡುತ್ತಿದೆ. ಆದರೆ, ಇದೇ ಮೊದಲ ಸಲ ಸೊರಬದಲ್ಲಿ ಸೋಂಕಿತರ ಸಂಖ್ಯೆ ಶೂನ್ಯ ದಾಖಲಾಗಿದೆ.
https://www.suddikanaja.com/2021/07/02/covid-case-decline-in-shivamogga-2/
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ 17, ಭದ್ರಾವತಿ 11, ಶಿಕಾರಿಪುರ 2, ತೀರ್ಥಹಳ್ಳಿ 5, ಸೊರಬ 0, ಹೊಸನಗರ 1, ಸಾಗರ 11, ಬಾಹ್ಯ ಜಿಲ್ಲೆಯ 2 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ಜಿಲ್ಲಾಡಳಿತ ಸೋಮವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜಿಲ್ಲೆಯಲ್ಲಿ 49 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 138 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 3 ಜನ ಮೃತಪಟ್ಟಿದ್ದಾರೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 4,244 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಹಳೆಯದ್ದೂ ಸೇರಿ ಒಟ್ಟು 1,974 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 131 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್ಸಿ 57, ಕೋವಿಡ್ ಕೇರ್ ಸೆಂಟರ್ ನಲ್ಲಿ 133, ಖಾಸಗಿ ಆಸ್ಪತ್ರೆಯಲ್ಲಿ 77, ಹೋಮ್ ಐಸೋಲೇಷನ್ ನಲ್ಲಿ 397 ಹಾಗೂ ಟ್ರಿಯೇಜ್ ಕೇಂದ್ರದಲ್ಲಿ 39 ಸೋಂಕಿತರಿದ್ದಾರೆ. 834 ಸಕ್ರಿಯ ಪ್ರಕರಣಗಳಿವೆ.
https://www.suddikanaja.com/2021/06/28/covid-cases-decline-in-shivamogga-3/