ಮಲೆನಾಡಿನ ಒಂಟಿ ಮನೆಗಳ ಮೇಲೆ ಮತ್ತೆ ಟಾರ್ಗೆಟ್, ಹಾಡಹಗಲೇ ದರೋಡೆ, ಮಹಿಳೆಯನ್ನು ಥಳಿಸಿ ಹಣ ಲೂಟಿ

 

 

ಸುದ್ದಿ ಕಣಜ.ಕಾಂ
ಸಾಗರ: ತೀರ್ಥಹಳ್ಳಿಯ ಒಂಟಿ ಮನೆಯೊಂದರಲ್ಲಿ ಈ ಹಿಂದೆ ದರೋಡೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಸಾಗರ ತಾಲೂಕಿನಲ್ಲಿ ಇಂತಹದ್ದೇ ಒಂದು ಘಟನೆ ಶುಕ್ರವಾರ ನಡೆದಿದೆ.

https://www.suddikanaja.com/2021/02/03/chain-snatching-pulsar-gang-re-active-in-shivamogga/

ಆನಂದಪುರಂ ಬಳಿಯ ಕೆಂಜಗಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಹಾಡಹಗಲೆ ಮನೆಗೆ ನುಗ್ಗಿ ಮಹಿಳೆಯೊಬ್ಬರನ್ನು ಥಳಿಸಿ ಮನೆಯಲ್ಲಿದ್ದ ಸುಮಾರು 2 ಲಕ್ಷ ರೂಪಾಯಿಯನ್ನು ಲೂಟಿ ಮಾಡಲಾಗಿದೆ.
ಹೇಗೆ ನಡೀತು ಘಟನೆ | ಕೆಂಜಗಾಪುರ ಗ್ರಾಮದ ಪುರೋಹಿತ ಶ್ರೀಧರ್ ಭಟ್ಟರು ಮನೆಯಲ್ಲಿ ಇಲ್ಲದಾಗ ಮೂವರು ದರೋಡೆಕೋರರು ಮನೆಯೊಳಗೆ ನುಗ್ಗಿದ್ದಾರೆ. ಆ ವೇಳೆ, ಮನೆಯಲ್ಲಿದ್ದು ಭಟ್ಟರ ಸಹೋದರಿ ವಿಜಯಲಕ್ಷ್ಮೀ ಎಂಬುವವರಿಗೆ ಥಳಿಸಿದ್ದಾರೆ.

ವಿಜಯಲಕ್ಷ್ಮೀ ಅವರು ಸಹಾಯಕ್ಕಾಗಿ ಕಿರುಚಿದ್ದಾರೆ. ಆದರೆ, ಅಕ್ಕ-ಪಕ್ಕ ಮನೆಗಳು ಇಲ್ಲದ್ದರಿಂದ ಯಾರಿಗೂ ಧ್ವನಿ ಕೇಳಿಸಿಲ್ಲ. ಹೀಗಾಗಿ, ದರೋಡೆಕೋರರು ಸುಲಭವಾಗಿ ಹಗಲು ಹೊತ್ತಲ್ಲೇ ಕೃತ್ಯ ನಡೆಸಿ ಪರಾರಿಯಾಗಿದ್ದಾರೆ.

ದೇವರ ವಿಗ್ರಹಕ್ಕೆಂದು ಇಟ್ಟಿದ್ದ ಹಣ | ದೇವರ ವಿಗ್ರಹ ತಯಾರಿಸುವುದಕ್ಕಾಗಿ ಮೀಸಲು ಇಟ್ಟಿದ್ದ ಸುಮಾರು 2 ಲಕ್ಷ ರೂಪಾಯಿಯನ್ನು ದರೋಡೆಕೋರರು ಲೂಟಿ ಮಾಡಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.

https://www.suddikanaja.com/2020/11/05/robering-showing-duplicate-gold/

error: Content is protected !!