ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ಎರಡು ತಿಂಗಳುಗಳಿಂದ ಕಾಡುತ್ತಿರುವ ಕೊರೊನಾ ವೈರಸ್ ತನ್ನ ಆರ್ಭಟವನ್ನು ಕಡಿಮೆ ಮಾಡಿದೆ. ಶನಿವಾರ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜಿಲ್ಲೆಯಲ್ಲಿ ಕೇವಲ 48 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಮಲೆನಾಡಿನ ಭೂ ಕುಸಿತದ ಫೈನಲ್ ರಿಪೋರ್ಟ್ ಸಿಎಂಗೆ ಸಲ್ಲಿಕೆ, ಯಡಿಯೂರಪ್ಪ ಹೇಳಿದ್ದೇನು?
182 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಮೂರು ಜನ ಮೃತಪಟ್ಟಿದ್ದಾರೆ. ಪಾಸಿಟಿವ್ ಸಂಖ್ಯೆಯಲ್ಲಿ ನಿರಂತರ ಇಳಿಕೆಯಾಗುತ್ತಿದ್ದು, ಸಕ್ರಿಯ ಪ್ರಕರಣಗಳೂ ಕಡಿಮೆಯಾಗಿವೆ.
ಜಿಲ್ಲೆಯಲ್ಲಿ ಪ್ರಸ್ತುತ 872 ಸಕ್ರಿಯ ಪ್ರಕರಣಗಳಿದ್ದು, ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 135 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್ಸಿ 86, ಕೋವಿಡ್ ಕೇರ್ ಸೆಂಟರ್ ನಲ್ಲಿ 162, ಖಾಸಗಿ ಆಸ್ಪತ್ರೆಯಲ್ಲಿ 126, ಹೋಮ್ ಐಸೋಲೇಷನ್ ನಲ್ಲಿ 310 ಹಾಗೂ ಟ್ರಿಯೇಜ್ ಕೇಂದ್ರದಲ್ಲಿ 53 ಸೋಂಕಿತರಿದ್ದಾರೆ.
ತಾಲೂಕುಗಳಲ್ಲೂ ಪ್ರಕರಣಗಳು ಇಳಿಕೆ | ಆರಂಭದಿಂದಲೂ ಶಿವಮೊಗ್ಗ ತಾಲೂಕಿನಲ್ಲಿ ಅಟ್ಟಹಾಸ ಮೆರೆದಿದ್ದ ಕೊರೊನಾ ಇಂದು 16 ಪ್ರಕರಣಗಳು ಪತ್ತೆಯಾಗಿವೆ. ಭದ್ರಾವತಿಯಲ್ಲಿ 11, ಶಿಕಾರಿಪುರ 5, ತೀರ್ಥಹಳ್ಳಿ 2, ಸೊರಬ 4, ಹೊಸನಗರ 1, ಸಾಗರ 5, ಬಾಹ್ಯ ಜಿಲ್ಲೆಯ 4 ಸೋಂಕಿತರಿದ್ದಾರೆ.