ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಸೂಳೆಬೈಲು ವ್ಯಾಪ್ತಿಯಲ್ಲಿ ಶನಿವಾರ ಬುಲ್ಡೋಜರ್ ಸದ್ದು ಮಾಡಿದೆ. ಅಕ್ರಮವಾಗಿ ಲೇಔಟ್ ಮಾಡಿದ್ದಲ್ಲದೇ ಚರಂಡಿ ಇತ್ಯಾದಿಗಳನ್ನು ನಿರ್ಮಾಣ ಮಾಡಕಾಗುತಿತ್ತು. ಮಾಹಿತಿ ಲಭಿಸಿದ್ದೇ ಸೂಡಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚರಂಡಿಯನ್ನು ತೆರವುಗೊಳಿಸಿದ್ದಾರೆ.
ಸೂಳೆಬೈಲು ಗ್ರಾಮದ ಸರ್ವೆ ನಂ.95ರಲ್ಲಿ 3 ಎಕರೆ 32 ಗುಂಟೆ ಜಮೀನಿನಲ್ಲಿ ಅಕ್ರಮವಾಗಿ ಲೇಔಟ್ ಮಾಡಲಾಗಿದೆ.
ಸೂಡಾದಿಂದ ಯಾವುದೇ ಪರವಾಮಗಿ ಪಡೆಯದೇ ಲೇಔಟ್ ಮಾಡಲಾಗಿದೆ. ಅಲ್ಲದೇ ಮೂಲ ಸೌಕರ್ಯಗಳನ್ನು ನಿರ್ಮಿಸುವ ಕೆಲಸ ಕೂಡ ಮಾಡಲಾಗುತಿತ್ತು. ಇದನ್ನು ಗಮನಿಸಿ ತೆರವು ಕಾರ್ಯಾಚರಣೆ ಮಾಡಲಾಗಿದೆ.
READ | ಶಿವಮೊಗ್ಗ ಜಿಲ್ಲೆಯ ತಾಲೂಕು ಪಂಚಾಯಿತಿಗಳ ವರ್ಗವಾರು ಮೀಸಲಾತಿ ಪಟ್ಟಿ ಪ್ರಕಟ, ಯಾವ ಕ್ಷೇತ್ರ ಯಾರಿಗೆ ಮೀಸಲು?
ಸೂಡಾ ಅಧಿಕೃತ ಮೂಲಗಳ ಪ್ರಕಾರ ಈ ಅನಧಿಕೃತ ಲೇಔಟ್ ಬಗ್ಗೆ ಹಿಂದೆಯೇ ಮಾಹಿತಿ ಲಭಿಸಿತ್ತು. ದಾಖಲೆ ಇತ್ಯಾದಿಗಳನ್ನು ಪರಿಶೀಲಿಸಿದ ನಂತರ ತೆರವು ಕಾರ್ಯ ಕೈಗೊಳ್ಳಲಾಗಿದೆ.
ಸೂಡಾದ ಅಧಿಕಾರಿಗಳಾದ ಗಂಗಾಧರಪ್ಪ. ಬಾಲರಾಜ್, ಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು.
ಊರುಗಡೂರು ಸೂಡಾ ಲೇಔಟ್ ನಲ್ಲಿ ಒತ್ತುವರಿ, ತೆರವಿಗೆ ಸೂಚನೆ, ಜಮೀನು ಕಳೆದುಕೊಂಡವರಿಗೆ ಹೆಚ್ಚಿನ ಪರಿಹಾರಕ್ಕೆ ಚಿಂತನೆ