ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಾಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಗಾಂಜಾ ಪ್ರಕರಣಗಳನ್ನು ಬೇಧಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
https://www.suddikanaja.com/2021/07/03/accused-arrested-5/
ಕೇಸ್ 1- ಸಾಗರ ರೈಲ್ವೆ ಸ್ಟೇಷನ್ ಹತ್ತಿರ ಇಬ್ಬರು ಬೈಕ್ ನಲ್ಲಿ ಗಾಂಜಾ ಮಾರಾಟ ಮಾಡುವ ಸಲುವಾಗಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಸಾಗರ ಟೌನ್ ಠಾಣೆ ಪಿಐ, ಪಿಎಸ್ಐ ಹಾಗೂ ಸಿಬ್ಬಂದಿಯ ತಂಡವು ದಾಳಿ ನಡೆಸಿದೆ.
ಅಣಲೇಕೊಪ್ಪ ಗ್ರಾಮದ ಸೂಫಿಯಾನ್ (21), ಕೆಳದಿ ರಸ್ತೆಯ ಅಬ್ಸಾನ್ (26), ಜೋಗಿನಗದ್ದೆ ಸೈಯ್ಯದ್ ಭಾಷಾ (44) ಎಂಬುವವರನ್ನು ಬಂಧಿಸಲಾಗಿದೆ. 12,000 ರೂಪಾಯಿ ಮೌಲ್ಯದ 630 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಕೇಸ್ 2- ಕಾಳಿಕಾಂಬ ಗ್ಯಾರೇಜ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಪಿಐ ಸಾಗರ ಟೌನ್ ಠಾಣೆ ಪಿಎಸ್ಐ, ಸಿಬ್ಬಂದಿ ತಂಡವು ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಕೆಳದಿ ರಸ್ತೆಯ ಇಮ್ತಿಯಾಜ್ (28) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಯಿಂದ 10,000 ರೂಪಾಯಿ ಮೌಲ್ಯದ 540 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ವಿರುದ್ಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.
https://www.suddikanaja.com/2021/06/29/ganja-seized-in-bhadravathi/