ಖಚಿತ ಮಾಹಿತಿ ಮೇರೆಗೆ ನಡೀತು ರೇಡ್, ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಕೊಮ್ಮನಾಳು ಕ್ರಾಸ್ ಹತ್ತಿರ ಗಾಂಜಾ ಮಾರಾಟ‌ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಮಂಗಳವಾರ ಮಧ್ಯಾಹ್ನ ಬಂಧಿಸಿದ್ದಾರೆ. ಬಂಧಿತನಿಂದ ಅಂದಾಜು 5,050 ರೂ. ಮೌಲ್ಯದ‌ ಒಟ್ಟು 560 ಗ್ರಾಂ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

READ | ರಾಜಕೀಯ ಚದುರಂಗದಲ್ಲಿ ಗೆದ್ದಿದ್ದು ರಾಜಾಹುಲಿ, ಬೊಮ್ಮಾಯಿಗೇಕೆ ಸಿಎಂ ಗದ್ದುಗೆ ಸಿಕ್ತು ಗೊತ್ತಾ?

ಕೊಮ್ಮನಾಳು ಗ್ರಾಮದ ಮಾಲತೇಶ್ ನಾಯ್ಕ್ (23) ಎಂಬುವವನಿಗೆ ಬಂಧಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ ಮಾಡಲಾಗಿದೆ. ಆರೋಪಿ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.

error: Content is protected !!