ಗಾಜನೂರು ಜಲಾಶಯದಿಂದ 40,000 ಕ್ಯೂಸೆಕ್ಸ್ ನೀರು ನದಿಗೆ ಬಿಡುಗಡೆ, ಮಳೆ ತಗ್ಗಿದರೂ ಹೆಚ್ಚಿದ ತುಂಗೆಯ ಆರ್ಭಟ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಗಾಜನೂರು ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಏರಿಕೆಯಾದ ಹಿನ್ನೆಲೆಯಲ್ಲಿ ಡ್ಯಾಂ‌ನಿಂದ ಬುಧವಾರ ರಾತ್ರಿ‌ 40,000 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ.

READ | ನೂರೆಂಟು ಪ್ರಶ್ನೆಗಳನ್ನು ಹುಟ್ಟು ಹಾಕಿದ ಯಡಿಯೂರಪ್ಪ ಟ್ವಿಟ್, ಇದು ವಿದಾಯದ ಮುನ್ಸೂಚನೆಯೇ? ಅಭಿಮಾನಿಗಳಿಂದ ಸಂಚಲನ ಮೂಡಿಸುವ ಪ್ರತಿಕ್ರಿಯೆಗಳು

ಮಲೆನಾಡಿನಲ್ಲಿ‌ ಪುಷ್ಯ ಮಳೆಯ ಆಗಮನವಾಗಿದ್ದು, ವರ್ಷಧಾರೆ ಇಳಿಮುಖವಾಗಿದೆ. ಆದರೆ, ತುಂಗಾ ನದಿಯ ಆರ್ಭಟ ಮುಂದುವರಿದಿದ್ದು, ಒಳಹರಿವು ಹೆಚ್ಚಿದ್ದರಿಂದ ರಾತ್ರಿ 10 ಗಂಟೆಯ ನಂತರ 30,000 ದಿಂದ 40,000 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ.

READ | ನೋ ನೆಟ್ವರ್ಕ್, ನೋ‌ ಓಟಿಂಗ್ ಅಭಿಯಾ‌ನದ ಪರ ಬೇಳೂರು‌ ಬ್ಯಾಟಿಂಗ್, ಗಂಭೀರ ಆರೋಪಗಳೇನು?

ಜಲಾಶಯ ನಯನ ಮನೋಹರ ದೃಶ್ಯ  | ಜಲಾಶಯದ ಕ್ರಸ್ಟ್ ಗೇಟ್ ಗಳ ಮೂಲಕ ಹೆಚ್ಚುವರಿ ನೀರನ್ನು ಹೊರ ಬಿಡುತಿದ್ದು, ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಕಣ್ಣು ಹಾಯಿಸಿದಷ್ಟು ದೂರ ಇಕ್ಕೆಲಗಳನ್ನು‌ ಚಾಚಿ ತುಂಗೆ ಹರಿಯುತಿದ್ದಾಳೆ.

error: Content is protected !!