ಸುದ್ದಿ ಕಣಜ.ಕಾಂ
ಶಿವಮೊಗ್ಗ: ವೀಕೆಂಡ್ ನಲ್ಲಿ ಜೋಗದ ಸಿರಿಯನ್ನು ಸವಿಯಲು ಭಾನುವಾರ ದಾಖಲೆಯ ಜನ ಹರಿದುಬಂದಿದ್ದಾರೆ. ಕಳೆದ ಭಾನುವಾರಕ್ಕೆ ಹೋಲಿಸಿದ್ದಲ್ಲಿ ಈ ವಾರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ.
ಕಳೆದ ಭಾನುವಾರ 6,500 ಜನ ಭೇಟಿ ನೀಡಿದ್ದರು. ಇಂದು 9 ಸಾವಿರ ಜನ ಪ್ರವಾಸಿಗರು ಆಗಮಿಸಿದ್ದಾರೆ. ಜತೆಗೆ, 1.67 ಲಕ್ಷ ರೂ. ಸಂಗ್ರಹವಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಜೋಗಕ್ಕೆ ಆಗಮಿಸಿದ್ದರು. ಏಕಾಏಕಿ ಅಧಿಕ ಸಂಖ್ಯೆಯಲ್ಲಿ ವಾಹನ ಬಂದುದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.
ಪ್ರವಾಸಿಗರಿಗೆ ನಿರಾಸೆ | ಜೋಗದ ನಯನ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಬೇಕು ಎಂದು ಹಲವೆಡೆಯಿಂದ ಬಂದಿದ್ದ ಪ್ರವಾಸಿಗರು ನಿರಾಸೆಗೆ ಒಳಗಾಗಿದ್ದಾರೆ. ಮಲೆನಾಡಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆ ಜೋರಾಗಿದ್ದು, ಭಾನುವಾರ ಕೂಡ ಪುನರ್ವಸುವಿನ ಆರ್ಭಟ ಜೋರಾಗಿಯೇ ಇತ್ತು. ಇದರಿಂದಾಗಿ, ಜೋಗದ ಇಡೀ ಪರಿಸರ ಮಂಜಿನಿಂದ ಆವೃತ್ತವಾಗಿತ್ತು. ಹೀಗಾಗಿ, ಬಂದ ಪ್ರವಾಸಿಗರು ರಾಜಾ, ರಾಣಿ, ರೋರರ್, ರಾಕೆಟ್ ಧುಮ್ಮಿಕ್ಕುವುದನ್ನು ನೋಡಲು ಸಾಧ್ಯವಾಗಲಿಲ್ಲ. ಆದರೆ, ಪ್ರವಾಸಿಗರು ಪ್ರಕೃತಿಯ ನಡುವೆ ಆಹ್ಲಾದದಿಂದ ಕುಣಿದು ಕುಪ್ಪಳಿಸಿದರು.
ಜೋಗದ ಬಗ್ಗೆ ಮಹತ್ವದ ಚರ್ಚೆ, ತಳಕಳಲೆಯಲ್ಲಿ ತಲೆ ಎತ್ತಲಿದೆ ವಾಟರ್ ಸ್ಪೋರ್ಟ್ಸ್