ಗಾಂಧಿ ಬಜಾರಿನಲ್ಲಿ ನಕಲಿ ಕೊಬ್ಬರಿ ಎಣ್ಣೆ ಮಾರಾಟ, ಪಕ್ಕಾ ಮಾಹಿತಿ ಮೇರೆಗೆ ಖಾಕಿ ರೇಡ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಖ್ಯಾತ ಕಂಪೆನಿಯೊಂದರ ಬ್ರ್ಯಾಂಡ್ ಗೆ ಹೋಲುವ ತದ್ರೂಪಿ ಕೊಬ್ಬರಿ ಎಣ್ಣೆ ಬಾಟಲಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ಪಕ್ಕಾ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಗಾಂಧಿ ಬಜಾರಿನ ಕುಚವಲಕ್ಕಿ ಕೇರಿಯ ಅಂಗಡಿಯೊಂದರಲ್ಲಿ ಪ್ರತಿಷ್ಠಿತ ಕಂಪೆನಿಯ ಬ್ರ್ಯಾಂಡ್ ದುರ್ಬಳಕೆ ಮಾಡಿಕೊಂಡು ಕೊಬ್ಬರಿ ಎಣ್ಣೆ ತಯಾರಿಸಿ ಮಾರಾಟ ಮಾಡಲಾಗುತಿತ್ತು. ಕಂಪೆನಿಯವರೇ ನೀಡಿದ ದೂರಿನ ಮೇರೆಗೆ ಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪರಿಶೀಲಿಸಿದಾಗ ಸಾಕಷ್ಟು ಎಣ್ಣೆ ಬಾಟಲಿಗಳನ್ನು ದಾಸ್ತಾನು ಮಾಡಲಾಗಿತ್ತು.
ಪ್ರತಿಷ್ಠಿತ ಕೊಬ್ಬರಿ ಎಣ್ಣೆ ಕಂಪೆನಿಯ ಲೋಗೊ, ಹೆಸರು ಹಾಗೂ ಬಣ್ಣ ಹೊಂದಿರುವ ಬಾಟಲಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!