ಶಿವಮೊಗ್ಗದ ಈ‌ ಪ್ರದೇಶದಲ್ಲಿ ಎರಡು ದಿನ ಕರೆಂಟ್ ಇರಲ್ಲ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆಲ್ಕೋಳಾ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಎಫ್ 12, 13 ಮತ್ತು 19ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿದ್ದು,‌ ಜುಲೈ 11 ಮತ್ತು‌ 12ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಯಾವ ಪ್ರದೇಶದಲ್ಲಿ ವ್ಯತ್ಯಯ | ಆಲ್ಕೋಳ ನಂದಿನಿ ಬಡಾವಣೆ, ವಿಕಾಸ ಶಾಲೆ ಹತ್ತಿರ, ಕನಕ‌ ಲೇಔಟ್, ಸಿದ್ಧಗಂಗಾ ಬಡಾವಣೆ, ಕಾಶಿಪುರ, ಜೆ.ಎಚ್.ಪಟೇಲ್ ಬಡಾವಣೆಯ ಎ, ಬಿ, ಸಿ, ಡಿ, ಇ ಮತ್ತು ಎಫ್ ಬ್ಲಾಕ್, ಸಹಕಾರ ನಗರ, ಗೋಕುಲ್ ಲೇಔಟ್, ದೀಪಕ್ ಲೇಔಟ್, ಸೋಮಿನಕೊಪ್ಪ‌, ಆದರ್ಶ ನಗರ, ಭೋವಿ ಕಾಲೊನಿ, ವಿಜಯಲಕ್ಷ್ಮೀ ಲೇಔಟ್, ಸಹ್ಯಾದ್ರಿನಗರ, ಗೆಜ್ಜೆನಹಳ್ಳಿ, ದೇವಕಾತಿಕೊಪ್ಪ, ಪಶುವೈದ್ಯಕೀಯ ಕಾಲೇಜು, ಹನುಮಂತನಗರ, ಅಂಬೇಡ್ಕರ್ ಕಾಲೊನಿ, ಜಲ್ಲಿ ಕ್ರಷರ್ಸ್, ಶಿವ ಸಾಯಿ ಕ್ಯಾಸ್ಟಿಂಗ್, ಬೈರನಕೊಪ್ಪ ಸುತ್ತಲಿ‌ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ನಗರ ಉಪ ವಿಭಾಗ 3ರ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!