ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಹಿನ್ನೆಲೆ ಎಸ್.ಎಸ್.ಎಲ್.ಸಿ ಪರೀಕ್ಷಾ ಪದ್ಧತಿಯಲ್ಲಿ ಭಾರಿ ಬದಲಾವಣೆಗಳನ್ನು ಮಾಡಲಾಗಿದೆ. ಅದರೆ, ಪೂರ್ವ ಸಿದ್ಧತಾ ಪರೀಕ್ಷೆಗೋಸ್ಕರ ಸಿದ್ಧಪಡಿಸಿರುವ ಓಎಂಆರ್ ಶೀಟ್ ನಲ್ಲಿ ಖಾಸಗಿ ಶಾಲೆಯೊಂದರ ಪ್ರಚಾರ ಮಾಡಲಾಗಿದೆ.
READ | ಗಾಂಧಿ ಬಜಾರ್ ನಲ್ಲಿ ದಿಢೀರ್ ದಾಳಿ, ಫೀಲ್ಡಿಗಿಳಿದ ಕಮಿಷ್ನರ್, ಕಾರಣವೇನು ಗೊತ್ತಾ?
ಓಎಂಆರ್ ನಲ್ಲಿ ಖಾಸಗಿ ಶಾಲೆಯ ಪ್ರಚಾರ ಮಾಡಿದನ್ನು ವಿರೋಧಿಸಿ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ಎಚ್.ಸಿ.ಯೋಗೇಶ್ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಸರ್ಕಾರದಿಂದ ನೀಡಲಾದ ಓಎಂಆರ್ ಶೀಟ್ ನಲ್ಲಿ ಖಾಸಗಿ ಶಾಲೆಯ ಜಾಹೀರಾತು ಪ್ರಕಟಿಸಿದ್ದು ಕಾನೂನು ಬಾಹಿರ. ಇದನ್ನು ಸರ್ಕಾರವೇ ಪ್ರಕಟಿಸದೆ ಎನ್ನುವಂತೆ ಭಾಸವಾಗುತ್ತಿದೆ. ಕೂಡಲೇ ಓಎಂಆರ್ ಶೀಟ್ ಗಳನ್ನು ಬದಲಿಸಬೇಕು. ಸಂಬಂಧಪಟ್ಟವರ ಮೇಲೆಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ದೇವೇಂದ್ರಪ್ಪ, ಕೆ. ರಂಗನಾಥ್, ಗಿರೀಶ್, ಶರತ್ ಕುಮಾರ್, ಪ್ರವೀಣ್, ಕುಮರೇಶ್ ಉಪಸ್ಥಿತರಿದ್ದರು.