ಸುದ್ದಿ ಕಣಜ.ಕಾಂ
ಶಿವಮೊಗ್ಗ: 2021-22ನೇ ಸಾಲಿನ ಡೇ-ನಲ್ಮ್ ಯೋಜನೆಯ ಎಸ್.ಇ.ಪಿ ಉಪ ಘಟಕದಡಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪಿಯಲ್ಲಿ ಬರುವ ಬಿಪಿಎಲ್ ಕುಟುಂಬದವರಿಗೆ ಸ್ವಂತ ಉದ್ದಿಮೆ ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ.
READ | ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು
ಶೇ. 7 ಕ್ಕಿಂತ ಮೇಲಿನ ಬಡ್ಡಿ ಸಹಾಯ ಧನದೊಂದಿಗೆ ಬ್ಯಾಂಕಿನ ಮೂಲಕ ಸಾಲ ನೀಡಲಾಗುತ್ತಿದ್ದು, ಸಾಲ ಪಡೆಯಲು ಇಚ್ಛಿಸುತ್ತಿರುವವರು ಮಹಾನಗರ ಪಾಲಿಕೆಯ ಡೇ-ನಲ್ಮ್ ಯೋಜನೆ ಕಚೇರಿಯಂದಿ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ದ್ವಿಪ್ರತಿಯೊಂದಿಗೆ ಲಗತ್ತಿಸಿ ಆಗಸ್ಟ್ 13ರೊಳಗೆ ಸಲ್ಲಿಸುವಂತೆ ಪಾಲಿಕೆಯ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಪಾಲಿಕೆಯ ಯೋಜನಾ ಕಚೇರಿಯನ್ನು ಸಂಪರ್ಕಿಸುವುದು.