ಅಪ್ರಾಪ್ತೆಯ ಮೇಲೆ‌‌‌ ದೊಡ್ಡಪ್ಪನ ಮಗನಿಂದಲೇ ಲೈಂಗಿಕ ದೌರ್ಜನ್ಯ, ಪ್ರಕರಣ‌ ಬೆಳಕಿಗೆ ಬಂದಿದ್ದು ಹೇಗೆ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಾಗರ ತಾಲೂಕಿನ ಹಳ್ಳಿಯೊಂದರ ಬಾಲಕಿಯ ಮೇಲೆ ದೊಡ್ಡಪ್ಪನ ಮಗನೇ ಲೈಂಗಿಕ ದೌರ್ಜನ್ಯ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

READ | ಸಾವಿನಲ್ಲೂ ಒಂದಾದ ಅಣ್ಣ-ತಂಗಿ

ಬಾಲಕಿಯು ತಾಯಿಯೊಂದಿಗೆ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತಿದ್ದು, ಸಾಗರ ತಾಲೂಕಿನ‌ ಗ್ರಾಮವೊಂದರಲ್ಲಿ ದೊಡ್ಡಪ್ಪನ‌ ಮನೆ ಇದೆ. ಅಲ್ಲಿಗೆ ಹೋದಾಗ ಮೇ ತಿಂಗಳಲ್ಲಿ ಲೈಂಗಿಕ ದೌರ್ಜನ್ಯ ಎಸಗುದ್ದಾನೆ ಎಂದು ತಿಳಿದುಬಂದಿದೆ.‌
ಬೆಳಕಿಗೆ ಬಂದಿದ್ದು ಹೇಗೆ | ಇತ್ತೀಚೆಗೆ ಬಾಲಕಿಯು ತನ್ನ ತಾಯಿಯೊಂದಿಗೆ ಕಾರ್ಯಕ್ರಮ ನಿಮಿತ್ತ ದಾವಣಗೆರೆಯ ಜಗಳೂರಿಗೆ ಹೋಗಿದ್ದರು‌. ಆಗ ಘಟನೆಯ ಬಗ್ಗೆ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ದಾವಣಗೆರೆ ಮಹಿಳಾ ಮತ್ತು ಸಾಂತ್ವನ ಕೇಂದ್ರಕ್ಕೆ ಪ್ರಕರಣದ ಬಗ್ಗೆ ಮಾಹಿತಿ ತಲುಪಿಸಲಾಗಿದೆ‌.

READ | ಚಂದನವನದಲ್ಲಿ ಡೈರೆಕ್ಟರ್ಸ್ ವಾರ್, ಟೇಶಿಗೆ ಡಿಚ್ಚಿ ಕೊಟ್ಟ ನಿರ್ದೇಶಕರು, ಏನಿದು ವಿವಾದ?

ನಂತರ, ಜಗಳೂರಿನ ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಮೇಲ್ವಿಚಾರಕಿಯವರು ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸುವುದಕ್ಕಾಗಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ.

error: Content is protected !!