COURT NEWS | ಒಬಿಸಿ ಘೋಷಿಸುವ ಅಧಿಕಾರ ರಾಜ್ಯಗಳಿಗಿಲ್ಲ

 

 

ಸುದ್ದಿ ಕಣಜ.ಕಾಂ
ನವದೆಹಲಿ: ರಾಜ್ಯಗಳಿಗೆ ಒಬಿಸಿ ಘೋಷಿಸುವ ಅಧಿಕಾರ ಇಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಸಮುದಾಯಗಳನ್ನು ಹಿಂದುಳಿದವು ಎಂದು ಗುರುತಿಸುವ ಏಕೈಕ ಅಧಿಕಾರ ರಾಷ್ಟ್ರಪತಿಗೆ ಮಾತ್ರ ಇದೆ ಎಂದು ನ್ಯಾಯಾಲಯ ಹೇಳಿದೆ.

https://www.suddikanaja.com/2021/07/02/shivamogga-zp-class-wise-reservation-announced/

ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಉದ್ದೇಶದಿಂದ ಸಮುದಾಯಗಳನ್ನ ಇತರ ಹಿಂದುಳಿದ ವರ್ಗಗಳು ಎಂದು ಘೋಷಿಸುವ ರಾಜ್ಯಗಳ ಅಧಿಕಾರ ಮೊಟಕುಗೊಳಿಸಿರುವ ನ್ಯಾಯಾಲಯವು ಮೇ 5ರ ತೀರ್ಪನ್ನು ಮರು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಕುರಿತು ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಏನಿದು ಮೇ 5ರ ತೀರ್ಪು | ಮರಾಠ ಕೋಟಾ ರದ್ದು ಪಡಿಸಿದಾಗ ನ್ಯಾಯಮೂರ್ತಿ ಅಶೋಕ್ ಭೂಷಣ್ ಅಧ್ಯಕ್ಷತೆಯ ಐವರು ಮೇ 5ರಂದು ಸಂವಿಧಾನದ 102ನೇ ತಿದ್ದುಪಡಿಯ ಮಾನ್ಯತೆಯನ್ನು ಎತ್ತಿಹಿಡಿದಿತ್ತು. ಹಿಂದುಳಿದ ವರ್ಗಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಹಕ್ಕು ಇದೆ ಎಂದು ಹೇಳಿತ್ತು. ರಾಜ್ಯಗಳಿಗೆ ಸಾಮಾಜಿಕ, ಶೈಕ್ಷಣಿಕ ಹಿಂದುಳಿದ ವರ್ಗಗಳ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರಿ ಇಲ್ಲ ಎಂದು ಹೇಳಿತ್ತು. ಇದರ ವಿರುದ್ಧ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ನ್ಯಾಯಾಲಯಕ್ಕೆ ಪರಿಶೀಲನಾ ಅರ್ಜಿ ಸಲ್ಲಿಸಿತ್ತು.

https://www.suddikanaja.com/2021/02/14/kunchatiga-community-meeting-in-shivamogga-demand-for-central-obc/

error: Content is protected !!