ವೀಕೆಂಡ್ ನಲ್ಲಿ ಜೋಗ ಫುಲ್ ರಷ್, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಟ್ರಾಫಿಕ್‌ ಜಾಮ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜೋಗ ಜಲಪಾತ ವೀಕ್ಷಿಸುವುದಕ್ಕೆ‌ ಸಾವಿರಾರು ಜನ ರಾಜ್ಯದ ನಾನಾ ಕಡೆಯಿಂದ ಹರಿದುಬಂದರು.

READ | ಗೋದಾಮಿನಿಂದಲೇ ಅಡಕೆ ಕದ್ದಿದ್ದ ಕಳ್ಳರು ಅರೆಸ್ಟ್, ಸಿಕ್ತು‌ ಏಳು‌ ಕ್ವಿಂಟಾಲ್ ಅಡಕೆ

ಮಂಜಿನಿಂದ ಆವೃತಗೊಂಡಿದ್ದ ಜೋಗದ ಸೊಬಗು ಕ್ಷಣ ಕ್ಷಣಕ್ಕೂ ಬದಲಾಗುತಿತ್ತು. ಪ್ರವಾಸಿಗರು ಅದನ್ನು ಕಣ್ತುಂಬಿಕೊಂಡರು.
ಹಲವೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಾರುಗಳು ಸಾಲುಗಟ್ಟಿ ನಿಂತಿದ್ದವು. ಗಂಟೆಗಟ್ಟಲೇ ಕಾದ ಬಳಿಕ ಜೋಗದ ಆವರಣಕ್ಕೆ ವಾಹನಗಳ ಪ್ರವೇಶ ಸಾಧ್ಯವಾಯಿತು.

READ | ಶಿವಮೊಗ್ಗದಲ್ಲಿ ಮುಂದುವರಿದ ಕೊರೊನಾ ಹಾವು-ಏಣಿ ಆಟ

ಮಾಸ್ಕ್, ಸಾಮಾಜಿಕ ಅಂತರ ಇಲ್ಲ | ಎರಡನೇ ಅಲೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ, ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ. ಆದರೆ, ಬಂದ ಪ್ರವಾಸಿಗರು ಮಾಸ್ಕ್, ಸಾಮಾಜಿಕ ಅಂತರ ಕಾಪಾಡದೇ ನಿರ್ಭಿಡೆಯಿಂದ ಜೋಗದ ಆವರಣದಲ್ಲಿ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

error: Content is protected !!