ಭಾರಿ ಮಳೆಯಿಂದಾಗಿ ಶಿರಾಳಕೊಪ್ಪಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ, ಟ್ಯಾಂಕರ್ ಮೂಲಕ ನೀರು ಸರಬರಾಜು

 

 

ಸುದ್ದಿ ಕಣಜ.ಕಾಂ
ಶಿರಾಳಕೊಪ್ಪ: ಭಾರಿ ಮಳೆ ಹಿನ್ನೆಲೆ ಶಿಕಾರಿಪುರದಿಂದ ನೀರು ಪೂರೈಸುವ ಘಟಕದಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ, ಶಿರಾಳಕೊಪ್ಪಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಶಿರಾಳಕೊಪ್ಪ ಪುರಸಭೆ ಪ್ರಕಟಣೆ ತಿಳಿಸಿದೆ.

READ | ತವರು ಜಿಲ್ಲೆ ಶಿವಮೊಗ್ಗಕ್ಕೆ ಸಿಎಂ ಯಡಿಯೂರಪ್ಪ ಭರ್ಜರಿ ಟಾಪ್ 10 ಗಿಫ್ಟ್, ಜೈಲು ಆವರಣದಲ್ಲಿ ಗಮನ ಸೆಳೆಯಲಿದೆ ಮ್ಯೂರಲ್ ಆರ್ಟ್

ನೀರು ಪೂರೈಸುವ ಮಿಷನ್ ಗಳನ್ನು ಚಾಲನೆ ಮಾಡಲು ಸಾಧ್ಯ ಆಗುತ್ತಿಲ್ಲ. ಹೀಗಾಗಿ, ನೀರು ಕಡಿಮೆ ಆಗುವವರೆಗೂ ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ನೀರು ಸರಬರಾಜು ವ್ಯವಸ್ಥೆ ಮಾಡಲು ತೊಂದರೆ ಆಗಲಿದೆ ಎಂದು ತಿಳಿಸಲಾಗಿದೆ.
ಟ್ಯಾಂಕರ್ ಮೂಲಕ ನೀರು | ಬೋರ್ವೆಲ್ ಜಾಗದಲ್ಲಿ ಬೋರ್ವೆಲ್ ಮುಖಾಂತರ ದೊಡ್ಡ ಟ್ಯಾಂಕ್ ಗಳಿಗೆ ನೀರು ತುಂಬಿ ಬಿಡಲಾಗುತ್ತಿದೆ. ಹೀಗಾಗಿ, ನೀರು ಸರಬರಾಜು ಮಾಡುವ ಸಮಯದಲ್ಲಿ ವ್ಯತ್ಯಾಸವಾಗಲಿದೆ. ಬೋರ್ವೆಲ್ ಇಲ್ಲದಿರುವ ಸ್ಥಳಗಳಿಗೆ ಪುರಸಭೆಯ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಕ್ರಮವಹಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಜನಪ್ರತಿನಿಧಿಗಳು ಪುರಸಭೆಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.

https://www.suddikanaja.com/2021/03/31/army-tanker-and-air-jet-install-in-mrs-circle/

error: Content is protected !!