ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೌನ್ ಬನೇಗಾ ಕರೋಡ್ ಪತಿ (ಕೆಬಿಸಿ) ಹೆಸರಿನಲ್ಲಿ ಸೋಪಿನಕೊಪ್ಪದ ವ್ಯಕ್ತಿಯೊಬ್ಬರಿಗೆ 30,100 ರೂಪಾಯಿ ಮೋಸ ಮಾಡಿರುವ ಘಟನೆ ವರದಿಯಾಗಿದೆ.
https://www.suddikanaja.com/2020/12/12/fraud-in-the-name-of-jan-dhan-scheme-in-bengaluru/
ಕೆಬಿಸಿನಲ್ಲಿ 25 ಲಕ್ಷ ರೂಪಾಯಿ ಬಹುಮಾನ ಬಂದಿದೆ. ಅದನ್ನು ಖಾತೆಗೆ ಜಮಾ ಮಾಡಬೇಕಾದರೆ ಕೆಲವು ಚಾರ್ಜ್ ತಗುಲುತ್ತದೆ ಎಂದು ತಿಳಿಸಲಾಗಿದೆ. ಈ ಮೂಲಕ ಹಂತ ಹಂತವಾಗಿ ಒಟ್ಟು 30,100 ರೂಪಾಯಿ ಗೂಗಲ್ ಪೇ ಮೂಲಕ ಹಾಕಿಸಿಕೊಂಡು ವಂಚನೆ ಮಾಡಲಾಗಿದೆ ಎಂದು ಮೋಸ ಹೋದ ವ್ಯಕ್ತಿ ದೂರು ನೀಡಿದ್ದಾರೆ.
ಜುಲೈ 7ರಂದು ದೂರುದಾರನ ವಾಟ್ಸಾಪ್ ಸಂಖ್ಯೆಗೆ ಒಂದು ವಿಡಿಯೋ ಬಂದಿದೆ. ಆ ವಿಡಿಯೋದಲ್ಲಿ ಕೆಬಿಸಿ ಎಂದಿರುವುದನ್ನು ನೋಡಿ ಅದರಲ್ಲಿದ್ದ ಮೊಬೈಲ್ ನಂಬರಿಗೆ ಸಂದೇಶ ಕಳುಹಿಸಿದ್ದಾರೆ. ಆಗ 25 ಲಕ್ಷ ರೂಪಾಯಿ ಬಹುಮಾನ ಬಂದಿರುವುದಾಗಿ ಪ್ರತಿಕ್ರಿಯೆ ಬಂದಿದೆ. ಅದನ್ನು ನಂಬಿ ವ್ಯಕ್ತಿಯು ಮೋಸ ಹೋಗಿದ್ದಾರೆ. ಶಿವಮೊಗ್ಗ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2021/04/18/if-you-are-a-whatsapp-user-then-this-is-a-must-read/