ಸುದ್ದಿ ಕಣಜ.ಕಾಂ | BHADRVATHI | BRP
ಭದ್ರಾವತಿ: ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಪ್ರತಿ ದಿನ 1,600 ಕ್ಯೂಸೆಕ್ಸ್ ನೀರನ್ನು ಹರಿಯಬಿಡಲಾಗುತ್ತಿದೆ ಎಂದು ಭದ್ರಾ ಜಲಾಶಯದ ಸೂಪರಿಂಟೆಂಡೆಂಟ್ ಎಂಜಿನಿಯರ್ ಚಂದ್ರಹಾಸ ಹೇಳಿದರು.
ಗುರುವಾರ ಜಲಾಶಯದ ನಾಲ್ಕು ಗೇಟುಗಳ ಮುಖಾಂತರ ನೀರನ್ನು ಹರಿಯಬಿಟ್ಟ ನಂತರ ಮಾಧ್ಯಮದ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡಿದರು.
ಮಳೆಗಾಲ ಆರಂಭದಲ್ಲೇ ಭದ್ರಾ ಜಲಾಶಯ ಭರ್ತಿ
ಪ್ರಸ್ತುತ ಸಂದರ್ಭದಲ್ಲಿ ಹಲವು ದಶಕಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಳೆಗಾಲದ ಆರಂಭದಲ್ಲಿಯೇ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಲು ಇನ್ನೂ ಒಂದೂವರೆ ಅಡಿ ಬಾಕಿ ಇದೆ. ನೀರಿನ ಒಳಹರಿವು ಹೀಗೆಯೆ ಮುಂದುವರಿಯಲಿದೆ. ಒಳ ಹರಿವಿನ ಪ್ರಮಾಣ ನೋಡಿ ನೀರನ್ನು ಹೊರಬಿಡಲಾಗುವುದು ಎಂದರು.
ಪ್ರಸ್ತುತ 15,206 ಕ್ಯೂಸೆಕ್ಸ್ ಒಳಹರಿವು ಇದ್ದು, ಭದ್ರಾ ಬಲ ದಂಡೆ ಮತ್ತು ಎಡ ದಂಡೆ, ವಿದ್ಯುತ್ ಉತ್ಪಾದನಾ ಘಟಕ ಮುಂತಾದ ನಾಲೆಗಳು ಸೇರಿದಂತೆ ಒಟ್ಟು 3,911 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಒಳ ಹರಿವು ಹೆಚ್ಚಳವಾದಂತೆ ಹೊರಬಿಡುವ ನೀರನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದರು.
https://www.suddikanaja.com/2021/07/30/due-to-timely-rainfall-all-dams-filled-in-shivamogga/
ರೈತರ ಬೆಳೆಗಳಿಗೆ ಅನುಕೂಲ
ಈ ನೀರು ತುಂಗಭದ್ರಾ ನದಿ ಹಾಗೂ ಏತ ನೀರಾವರಿ ಯೋಜನೆಗಳು, ನೆರೆಯ ಜಿಲ್ಲೆಗಳ ಕೆರೆ ಕಟ್ಟೆ ಕಾಲುವೆಗಳನ್ನು ಭರ್ತಿ ಮಾಡಲು ಅನುಕೂಲವಾಗಲಿದೆ ಅಲ್ಲದೇ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗೆ ಸಹಕಾರಿಯಾಗಲಿದೆ.
ಪ್ರತಿ ವರ್ಷಕ್ಕಿಂತ ಈ ಸಲ ಅಧಿಕ ನೀರು ಭರ್ತಿ
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಮಾತನಾಡಿ, ಈ ಅವಧಿಯಲ್ಲಿ ಪ್ರತಿ ವರ್ಷಕ್ಕಿಂತ ಹೆಚ್ಚಿನ ನೀರು ತುಂಬಿರುವುದು ರೈತರಲ್ಲಿ ಹರ್ಷ ಮೂಡಿಸಿದೆ. ಇದರಿಂದಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಅಚ್ಚುಕಟ್ಟು ಪ್ರದೇಶದ ಕೊನೆಯ ರೈತರ ಹೊಲಗಳಿಗೆ ನೀರು ಹರಿಯುವ ವಿಶ್ವಾಸ ತಮಗಿರುವುದಾಗಿ ತಿಳಿಸಿದರು.
READ | ರೈಲ್ವೆ ಸೀಸನ್ ಟಿಕೆಟ್ ಪುನರಾರಂಭ, ಯಾವಾಗಿಂತ ವಿತರಣೆ, ಅವಧಿ ಮುಗಿದ ಟಿಕೆಟ್ ಹೊಂದಿದವರಿಗೆ ಗುಡ್ ನ್ಯೂಸ್
ಕಳಪೆ ಕಾಮಗಾರಿಯಿಂದ ರೈತರಿಗೆ ಯಾವ ಹಾನಿ ಇಲ್ಲ
ಜಲಾಶಯದ ಪಾತ್ರದಲ್ಲಿ ಆಗಿರುವ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಮಾಹಿತಿ ಇರುವ ಬಗ್ಗೆ ತಜ್ಞರಿಂದ ಮಾಹಿತಿ ಪಡೆದುಕೊಂಡಿದ್ದು, ಇದರಿಂದಾಗಿ ರೈತರಿಗೆ ಯಾವುದೇ ಹಾನಿಯಾಗುವುದಿಲ್ಲ. ರೈತರು ಆತಂಕಪಡುವ ಅಗತ್ಯವಿಲ್ಲ. ಈ ಸಂಬಂಧ ಮೂವರು ತಜ್ಞರ ಸಮಿತಿಯೊಂದನ್ನು ರಚಿಸಿದ್ದು, ಶೀಘ್ರದಲ್ಲಿ ವರದಿ ದೊರೆಯಲಿದೆ. ನಂತರ ಕ್ರಮ ಕೈಗೊಳ್ಳಬೇಕಾದ ವಿಷಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.
https://www.suddikanaja.com/2021/07/24/state-biggest-dam-linganamakki-inflow-increase-due-to-hameavy-rain-in-catchment-area/